ಮುಖ್ಯಮಂತ್ರಿಯ ಮಗ ಚಿತ್ರರಂಗಕ್ಕೆ ಎಂಟ್ರಿ?.. ಸಂಪೂರ್ಣ ಮಾಹಿತಿ ಇಲ್ಲಿ ಓದಿ

ನಟ ಹಾಗೂ ರಾಜಕಾರಣಿ ಮುಖ್ಯಮಂತ್ರಿ ಚಂದ್ರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? 80ರ ದಶಕದಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಹಾಗೂ 90ರ ದಶಕದಲ್ಲಿ ಕಾಮಿಡಿ ಪಾತ್ರಗಳಲ್ಲಿ ಮಿಂಚಿ ನಮ್ಮನ್ನು ರಂಜಿಸಿ ಕಾಲವೇ ಕಳೆದಿದೆ. ಆದರೆ ಈಗ ಹೊಸ ಸಿಹಿ ಸುದ್ದಿ ಏನ್ ಗೊತ್ತಾ? ಅವರ ಪುತ್ರ ಶರತ್ ಚಂದ್ರು ಕನ್ನಡ ಸಿನಿಮಾದಲ್ಲಿ ನಾಯಕನಾಗಿ ಎಂಟ್ರಿ ಪಡೆಯುತ್ತಿದ್ದಾರೆ.

ಸುದೀಪ್ ಅಭಿನಯದ ರನ್ನ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ವಿಲನ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಶರತ್ ಪೂರ್ಣ ಪ್ರಮಾಣದಲ್ಲಿ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.

ವಿಕ್ರಮ್ ಆಸ್ಪತ್ರೆಗಾಗಿ 2 ಶಾರ್ಟ್ ಫಿಲಂ ಮಾಡುತ್ತಿದ್ದ ವಿನಯ್ ಭಾರದ್ವಾಜ್ ಮೊದಲ ಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಕನ್ನಡಿಗನಾಗಿರುವ ವಿನಯ್ 14 ವರ್ಷ ಸಿಂಗಾಪೂರ್ ನಲ್ಲಿ ನೆಲೆಸಿದ್ದರು. ಚಿತ್ರದಲ್ಲಿ ಹಿತ ಚಂದ್ರಶೇಖರ್ ನಾಯಕಿಯಾಗಿ ನಟಿಸುತ್ತಿದ್ದಾಳೆ, 12 ನೇ ಶತಮಾನದ ಅಕ್ಕ ಮಹಾದೇವಿಯ ರಚನೆಯ ಕನಸ ಕಂಡೆ ವಚನವನ್ನು ಸಮಕಾಲೀನ ಶೈಲಿಗೆ ಹೊಂದಿಸಿದ ವಿಡಿಯೋ ಬಿಡುಗಡೆ ಮಾಡಲಾಗಿದೆ.

Facebook Auto Publish Powered By : XYZScripts.com