’ಮುಕುಂದ ಮುರಾರಿ’ ಕುರಿತ ನಂದಕಿಶೋರ್ ಅನುಭವ

ನಂದಕಿಶೋರ್ ಅವರು ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟವರು. ಈ ಸಲ ಅವರ ಸಿನಿಮಾದಲ್ಲಿ ಇಬ್ಬರು ದೊಡ್ಡ ಸ್ಟಾರ್ ಗಳಿದ್ದಾರೆ. ಒಂದು ಕಡೆ ಕಿಚ್ಚ ಸುದೀಪ್, ಇನ್ನೊಂದು ಕಡೆ ರಿಯಲ್ ಸ್ಟಾರ್ ಉಪೇಂದ್ರ. ಮುಕುಂದ ಮುರಾರಿ ಬಹಳ ದೊಡ್ಡ ಜವಬ್ದಾರಿ. ಆದರೆ ಈ ಸಿನಿಮಾ ರೀಮೇಕ್ ಆಗಿರೋದ್ರಿಂದ ಸಬ್ಜೆಕ್ಟ್ ಬಗ್ಗೆ ಎಲ್ಲರಿಗೂ ಕ್ಲಾರಿಟಿ ಇರೋದ್ರಿಂದ ಎಲ್ಲೂ ಸಮಸ್ಯೆ ಆಗ್ಲಿಲ್ಲ.
ಸುದೀಪ್ ಜೊತೆಗೇನೋ ಈ ಹಿಂದೆ ’ರನ್ನ’ ಮಾಡಿದ್ರು, ಆದರೆ ಉಪೇಂದ್ರ ಜೊತೆಗೆ ನಂದಕಿಶೋರ್ ಕೆಲಸ ಮಾಡುತ್ತಿರುವುದು ಇದೇ ಮೊದಲು. ಆದರೂ ಆ ರೀತಿ ಏನೂ ಫೀಲ್ ಆಗ್ಲಿಲ್ವಂತೆ. ಉಪೇಂದ್ರ ಅವರು ಡೌನ್ ಟು ಅರ್ಥ್. ನಿರ್ದೇಶಕರು ಏನ್ ಹೇಳ್ತಾರೋ ನಟನಾಗಿ ಅವರು ಅದನ್ನ ಹಾಗೇ ಮಾಡ್ತಿದ್ರು.
ಎಲ್ಲೋ ಒಂದೊಂದ್ ಸಲ ಈ ಸೀನ್ ಹಿಂಗಿದ್ರೆ ಇನ್ನೂ ಚೆನ್ನಾಗಿತ್ತು ಅಂತ ಸಲಹೆಗಳನ್ನ ಕೊಡ್ತಿದ್ರಂತೆ. ಒಟ್ನಲ್ಲಿ ಈ ರೀತಿ ಇಬ್ಬರು ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿರುವುದು ತುಂಬ ಖುಷಿ ಕೊಟ್ಟಿದೆ ಅಂತ ನಂದಕಿಶೋರ್ ಹೇಳಿದ್ದಾರೆ. ಅಂದಹಾಗೆ ಮುಕುಂದ ಮುರಾರಿ ಚಿತ್ರ ಬಾಲಿವುಡ್‌ನ ಓ ಮೈ ಗಾಡ್ ಚಿತ್ರದ ರೀಮೇಕ್. ದೀಪಾವಳಿ ಹಬ್ಬಕ್ಕೆ ಚಿತ್ರಮಂದಿರದಲ್ಲಿ ಪಟಾಕಿ ಹೊಡೆಯೋಕೆ ಬರ್ತಿದೆ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com