ಮುಂದಿನ ‘ಬಿಗ್ ಬಾಸ್’ ನಲ್ಲಿ ‘ದರ್ಶನ್-ಸುದೀಪ್’ ಮುಖಾಮುಖಿ?

ಕನ್ನಡ ಕಿರುತೆರೆಯಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಜನಪ್ರಿಯವಾಗಿದೆ. ಯಾರು ಯಾವಾಗ ಮನೆಯಿಂದ ಗೇಟ್ ಪಾಸ್ ಪಡೆಯುತ್ತಾರೋ ಗೊತ್ತಾಗಲ್ಲ. ಅದೂ ಒಂಥರಾ ಹಾವು-ಏಣಿ ಆಟದಂತಿರುವುದರಿಂದ ಅಚ್ಚರಿ ಹಾಗೂ ಕುತೂಹಲದ ಕೇಂದ್ರಬಿಂದುವಾಗಿದೆ.
ಇದೀಗ ನಡಯುತ್ತಿರುವುದು ‘ಬಿಗ್ ಬಾನ್ ಸೀಸನ್ 4’.  ಈ ಬಾರಿ ಗೆಲ್ಲುವವರು ಯಾರು?  ಎಂಬ ಕುತೂಹಲ ಹೆಚ್ಚಾಗುತ್ತಿದೆ.
ಇನ್ನೇನು ‘ಬಿಗ್ ಬಾಸ್’ ನ ಈ ಸೀಸನ್ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಯಾರಿಗೆ ಗೆಲುವಿನ ಅದೃಷ್ಟಲಕ್ಷ್ಮಿ ಒಲಿಯಬಹುದು ಎಂಬ ಲೆಕ್ಕಾಚಾರ ಸಾಗಿದೆ.
ಈ ನಡುವೆ ‘ಬಿಗ್ ಬಾಸ್’ ವೇದಿಕೆಯಲ್ಲಿ ಛಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮುಖಾಮುಖಿಯಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ‘ದರ್ಶನ್-ಸುದೀಪ್’ ಸ್ಯಾಂಡಲ್ ವುಡ್ ನ ದಶಕಗಳ ತಾರಾಗೆಳೆಯರು. ಅವರನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿರುವುದು ವಿರಳ.
‘ಬಿಗ್ ಬಾಸ್’ ಶೋನ ವಾರಂತ್ಯದಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತದೆ. ಕೆಲ ವಾರಗಳ ಹಿಂದೆ ‘ಬಿಗ್ ಬಾಸ್’ ಮನೆಗೆ ಭೇಟಿ ನೀಡಿದ ಪೂಜಾ ಗಾಂಧಿ ‘ಜಿಲೇಬಿ’ ಚಿತ್ರದ ಬಗ್ಗೆ ಪ್ರಚಾರ ಗಿಟ್ಟಿಸಿಕೊಂಡರು. ಅನಂತರ ‘ಕಿರಿಕ್ ಪಾರ್ಟಿ’ಯ ರಕ್ಷಿತ್ ಶೆಟ್ಟಿ ಗಮನಸೆಳೆದರು. ಕಳೆದ ವಾರ  ರಮೇಶ್ ಅರವಿಂದ್ ತಮ್ಮ 100 ಚಿತ್ರಗಳ ಸಾಹಸಗಾಥೆಯನ್ನು ವಿವರಿಸಿ, ತಮ್ಮ ಮಹತ್ವಾಕಾಂಕ್ಷೆಯ ‘ಪುಷ್ಪಕ ವಿಮಾನ’ದ ಬಗ್ಗೆ ಬೆಳಕು ಚೆಲ್ಲಿದರು.
ಅವರಂತೆಯೇ ಇದೀಗ 50 ಚಿತ್ರಗಳ ಸರದಾರ ಅನಿಸಿಕೊಳ್ಳುತ್ತರುವ ‘ದರ್ಶನ್’ ಅವರು ಬಿಗ್ ಬಾಸ್ ವೇದಿಕೆಗೆ ಯಾವಾಗ ಬರುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Courtesy: Balkani News

Facebook Auto Publish Powered By : XYZScripts.com