ಮುಂದಿನ ತಿಂಗಳು ‘ಚೌಕ’ದೊಳಗೆ ಸಿಗಲಿದೆ ‘ಚಕ್ರವರ್ತಿ’ ದರ್ಶನ

ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿರುವ ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಕ್ರವರ್ತಿ ಕೂಡ ಒಂದು. ಶೂಟಿಂಗ್ ಹಂತದಲ್ಲೇ ಈ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಪೋಸ್ಟರ್ನಿಂದ್ಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದ ಸಿನಿಮಾ ಇದು. ಶೂಟಿಂಗ್ ಶುರುವಾಗುವ ಆ ಹೈಪ್ ಮತ್ತೊಂದು ಹಂತಕ್ಕೆ ಹೋಗಿತ್ತು. ದರ್ಶನ್ ಪಾತ್ರಕ್ಕಿರುವ ಶೇಡ್, ಚಾಲಿಂಜಿಂಗ್ ಸ್ಟಾರ್ ಲುಕ್, ಅದ್ದೂರಿ ತಾರಾಗಣ. ಫಾರಿನ್ ಶೂಟಿಂಗ್ ಹೀಗೆ ಚಕ್ರವರ್ತಿ ಒಂದರಮೆಲೊಂದು ಕುತೂಹಲಕರ ವಿಷಯಗಳನ್ನು ಬಹಿರಂಗ ಮಾಡುತ್ತಲ್ಲೇ ಬಂದಿತ್ತು.
ಈ ಎಲ್ಲಾ ಕಾರಣಗಳಿಂದ ಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ರು. ಅಲ್ಲದೆ ಚಕ್ರವರ್ತಿ ಡಿಸೆಂಬರ್ಗೆ ರಿಲೀಸ್ ಆಗುತ್ತೆ ಅಂತ ಈ ಮೊದಲು ಸುದ್ದಿ ಇದ್ದಿದ್ರಿಂದ ಅಭಿಮಾನಿಗಳ ಅದ್ದಕ್ಕಾಗಿ ಕಾಯುತ್ತಿದ್ರು. ಆದ್ರೆ ಇದೀಗ ಮತ್ತೊಂದು ಸುದ್ದಿ ಬಂದಿದೆ. ಮೊದಲಿದ್ದ ಸುದ್ದಿಯ ಪ್ರಕಾರ ಚಕವರ್ತಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ರಿಲೀಸ್ ಆಗ್ಬೇಕಿತ್ತು. ಆದ್ರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್ಲ. ಬದಲಿಗೆ ಮುಂದಿನ ವರ್ಷ ಅಂದ್ರೆ ಜನವರಿ ಕೊನೆಯಲ್ಲಿ ಚಕ್ರವರ್ತಿ ತೆರೆಕಾಣಲಿದೆ.
ಆದ್ರೆ ಮುಂದಿನ ತಿಂಗಳು ಚಕ್ರವರ್ತಿ ಸಿನಿಮಾ ನೋಡುವುದಕ್ಕಿಲ್ವಲ್ಲಾ ಅಂತ ಡಿ ಫ್ಯಾನ್ಸ್ ಬೇಜಾರಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಮುಂದಿನ ತಿಂಗಳು ಕೂಡ ಸ್ಯಾಂಡಲ್ವುಡ್ ಸಾರಥಿಯನ್ನು ತೆರೆಮೆಲೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ. ಚಕ್ರವರ್ತಿ ರಿಲೀಸ್ ಆಗುತ್ತೆ ಅಂತ ಹೇಳಲಾಗಿದೆ ಡೇಟ್ಗೆ ಅಂದ್ರೆ ಡಿಸೆಂಬರ್ 23ಕ್ಕೆ ಚೌಕ ಸಿನಿಮಾ ರಿಲೀಸ್ ಆಗಲಿದೆ. ಈ ಮಲ್ಟಿ ಸ್ಟಾರರ್ ಚಿತ್ರದಲ್ಲಿ ದರ್ಶನ್ ಗೆಸ್ಟ್ ರೋಲ್ ಮಾಡಿದ್ದಾರೆ. ಹೀಗಾಗಿ ಚೌಕ ಸಿನಿಮಾದಲ್ಲಿ ಮುಂದಿನ ತಿಂಗಳು ಡಿ ಫ್ಯಾನ್ಸ್ ಚಕ್ರವರ್ತಿಯನ್ನು ಕಣ್ತುಂಬಿಕೊಳ್ಳಬಹುದು.
Courtesy: Balkani News

Facebook Auto Publish Powered By : XYZScripts.com