‘ಮಾಸ್ ಲೀಡರ್’ 3 ಡಿ ಗೇಮ್ ಬಂದಿದೆ ಗುರು…

ಶಿವರಾಜ್ ಕುಮಾರ್ ಅಭಿನಯದ ‘ಮಾಸ್ ಲೀಡರ್’ ಚಿತ್ರ ಕಳೆದ ವಾರವಷ್ಟೇ ರಾಜ್ಯಾದ್ಯಂತ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ, ‘ಮಾಸ್ ಲೀಡರ್’ ಚಿತ್ರದ 3 ಡಿ ಗೇಮ್ ಬಿಡುಗಡೆಯಾಗಿದೆ.

‘ಮಾಸ್ ಲೀಡರ್’ ಚಿತ್ರದ ಕಥೆಗೆ ಹೊಂದುವಂತೆ, ಭಯೋತ್ಪಾದಕರನ್ನ ದಮನ ಮಾಡುವ ಕುರಿತು ಇಂಟರೆಸ್ಟಿಂಗ್ ಆಗಿ ಗೇಮ್ ನ್ನ ನಿರ್ಮಿಸಲಾಗಿದೆ. ಈ ಗೇಮ್ ಬಗ್ಗೆ ನಟ ಶಿವರಾಜ್ ಕುಮಾರ್ ಮತ್ತು ನಿರ್ಮಾಪಕ ತರುಣ್ ಶಿವಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದ್ಹಾಗೆ ಈ ಗೇಮ್ ನಿರ್ಮಾಣ ಮಾಡಿರುವುದು ಇನ್ಪ್ಯಾಂಟ್ ಸ್ಟುಡಿಯೋಸ್ ಸಂಸ್ಥಾಪಕ ಡೇವಿಡ್. ಪವನ್ ಎಂಬುವವರು ಈ ಗೇಮ್ ವಿನ್ಯಾಸ ಮಾಡಿದ್ದು, ಇವರಿಗೆ ಸಂತೋಷ್, ಅಶೋಕ್ರೆಡ್ಡಿ, ಓಂಕಾರ್ ಸಾಥ್ ಕೊಟ್ಟಿದ್ದಾರೆ.

‘ಮಾಸ್ ಲೀಡರ್’ ಗೇಮ್ ಅನ್ನು ಡೌನ್ಲೋಡ್ ಮಾಡಲು ಗೂಗಲ್ Play store app ನಲ್ಲಿ android ಮೊಬೈಲ್ ಬಳಕೆದಾರರು leader srk (ಲೀಡರ್ ಎಸ್‌ಆರ್ಕೆ) ಎಂದು ಟೈಪ್ ಮಾಡಿದರೆ, ಶಿವರಾಜ್ ಕುಮಾರ್ ಮುಖಭಾವದ ಚಿತ್ರ ಕಾಣುತ್ತೆ. ಅದನ್ನು ಕ್ಲಿಕ್ ಮಾಡಿದರೆ ಮೊಬೈಲ್ನಲ್ಲಿ ಈ ಗೇಮ್ ಸ್ಟೋರ್ ಆಗಲಿದೆ.

source: filmibeat.com

Facebook Auto Publish Powered By : XYZScripts.com