ಮಾಸ್ತಿಗುಡಿ ದುರಂತ : ಆರು ಜನರ ವಿರುದ್ಧ ಚಾರ್ಜ್ ಶೀಟ್

ಮಾಸ್ತಿಗುಡಿ ಸಿನಿಮಾದ ಚಿತ್ರೀಕರಣದ ವೇಳೆ ಖಳನಟರಿಬ್ಬರ ದುರಂತ ಸಾವು ಕಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಮಾಸ್ತಿಗುಡಿ ಸಿನಿಮಾದ ನಿರ್ಮಾಪಕ ಪಿ.ಸುಂದರ್ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ದಾರ್ಥ್, ಸಾಹಸ ನಿರ್ದೇಶಕ ರವಿವರ್ಮಾ, ಯೂನಿಟ್ ಮ್ಯಾನೇಜರ್ ಭರತ್, ಹಾಗೂ ಹೆಲಿಕ್ಯಾಪ್ಟರ್ ಫೈಲೆಟ್ ಪ್ರಕಾಶ್ ಬಿರಾದಾರ್ ಸೇರಿದಂತೆ ಆರು ಜನರ ವಿರುದ್ಧ ಮಾಗಡಿ 1 ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಮಾಸ್ತಿಗುಡಿ ಸಿನಿಮಾದ ಶೂಟಿಂಗ್ ವೇಳೆ ಖಳನಟ ಉದಯ್ ಹಾಗೂ ಅನಿಲ್ ಸಾವನ್ನಪ್ಪಿದ್ದರು.

Courtesy: Kannada News Now

Facebook Auto Publish Powered By : XYZScripts.com