ಮಾಸ್ತಿಗುಡಿ’ಯಲ್ಲಿ ಅದ್ಭುತವಾದ ಕಂಪ್ಯೂಟರ್ ಗ್ರಾಫಿಕ್ಸ್ ಇದೆ: ನಿರ್ದೇಶಕ

ಬೆಂಗಳೂರು: ಈಗ ‘ಮಾಸ್ತಿ ಗುಡಿ’ ಚಲನಚಿತ್ರ ಸೆನ್ಸಾರ್ ಮಂಡಳಿ ಬಾಗಿಲು ಬಡಿದಿದ್ದು, ನಿರ್ದೇಶಕ ನಾಗಶೇಖರ್ ೧೦ ಸೆಕಂಡ್ ಗಳ ಟೀಸರ್ ಗಳನ್ನು ಕಟ್ ಮಾಡುವಲ್ಲಿ ನಿರತರಾಗಿದ್ದಾರೆ. ಮೇ ೧೨ ರಂದು ಸಿನೆಮಾ ಬಿಡುಗಡೆಯಾಗಲಿದ್ದು, ಈ ಟೀಸರ್ ಗಳನ್ನು ಅಲ್ಲಿಯವರೆಗೂ ಒಂದರ ನಂತರ ಒಂದನ್ನು ಬಿಡುಗಡೆ ಮಾಡಲಿದ್ದಾರಂತೆ. ಹಲವಾರು ಕಾರಣಗಳಿಗೆ ಈ ಸಿನೆಮಾ ಕುತೂಹಲ ಮೂಡಿಸಿದ್ದು, ಸುಮಾರು ಒಂದು ಘಂಟೆ ಕಾಲದ ದೃಶ್ಯಗಳು ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಮೂಡಿವೆ ಎಂಬ ಅಂಶ ಕೂಡ ಅದರಲ್ಲಿ ಒಂದು. ನಿರ್ದೇಶಕ ಹೇಳುವಂತೆ ಮಾಸ್ತಿಗುಡಿ ಕನ್ನಡದ ಅತಿ ದೊಡ್ಡ ಕಂಪ್ಯೂಟರ್ ಗ್ರಾಫಿಕ್ಸ್ ಚಿತ್ರವಂತೆ. “ನಾನು ವಿವಿಧ ದೃಶ್ಯಗಳನ್ನು ಗ್ರಾಫಿಕ್ಸ್ ನಲ್ಲಿ ಮೂಡಿಸಿದ್ದೇವೆ. ಅವುಗಳಲ್ಲಿ ಹೆಚ್ಚು ಪ್ರಾಣಿಗಳನ್ನು ಒಳಗೊಂಡಿರುವಂತವು. ಹುಲಿ, ಚಿರತೆ, ಹಾವುಗಳನ್ನು ಮೂಡಿಸಲು ಬಳಸಿದ್ದೇವೆ” ಎನ್ನುತ್ತಾರೆ ನಾಗಶೇಖರ್. 

‘ಮಾಸ್ತು ಗುಡಿ’ ಸಿನೆಮಾದ ಗ್ರಾಫಿಕ್ಸ್ ಗಾಗಿಯೇ ನಿರ್ಮಾಪಕರಿಗೆ ೨ ಕೋಟಿ ಖರ್ಚಾಗಿದೆಯಂತೆ.

ಇದನ್ನು ಮೂರು ಸಂಸ್ಥೆಗಳು ಅಭಿವೃದ್ಧಿಪಡಿಸಿವೆಯಂತೆ. “ಸಿನೆಮಾ ಮಾಡಲು ಅರ್ಧ ಸಮಯ ಈ ಗ್ರಾಫಿಕ್ಸ್ ಗಾಗಿಯೇ ಹಿಡಿಯಿತು” ಎನ್ನುವ ನಾಗಶೇಖರ್ “ನಾನು ನನ್ನ ಸಹೋದರ ಮತ್ತು ನಿರ್ದೇಶನ ತಂಡದಿಂದ ಸ್ಟೋರಿ ಬೋರ್ಡ್ ಮಾಡಿಸಿ ಅದನ್ನು ಸಂಪೂರ್ಣ ಗ್ರಾಫಿಕ್ಸ್ ನಲ್ಲಿಯೇ ಮುಗಿಸಿದೆವು” ಎನ್ನುತ್ತಾರೆ. 

ಈ ಸಿನೆಮಾವನ್ನು ಮಲಯಾಳಂ ಸೂಪರ್ ಹಿಟ್ ಸಿನೆಮಾ ‘ಪುಲಿಮುರುಗನ್’ಗೆ ಹೋಲಿಸುತ್ತಿರುವುದನ್ನು ತಳ್ಳಿಹಾಕುವ ನಿರ್ದೇಶಕ “ಸಿನೆಮಾ ಬಿಡುಗಡೆ ಆಗುವವರೆಗೂ ಕಾಯಿರಿ ಎಂದಷ್ಟೇ ಹೇಳುತ್ತೇನೆ. ಹೋಲಿಕೆಗಳು ಮತ್ತು ಒಂದರ ನಡುವೆ ಸಾಮ್ಯತೆ ಕಂಡುಹಿಡಿಯುವುದು ಪರವಾಗಿಲ್ಲ ಆದರೆ ನಕಲು ಎನ್ನದಿದ್ದರೆ ಸಾಕು. ನಾನು ನಾಲ್ಕು ಸಿನೆಮಾಗಳನ್ನು ಮಾಡಿದ್ದೇನೆ ಮತ್ತು ನನ್ನ ಬಳಿ ೨೫ಕ್ಕೂ ಹೆಚ್ಚು ಸ್ವಂತ ಕಥೆಗಳು ಈಗಲೂ ಸಿದ್ಧವಿವೆ. ನನ್ನ ಐಡಿಯಾಗಳು ಬತ್ತಿಹೋಗಿಲ್ಲ” ಎನ್ನುತ್ತಾರೆ. 

Courtesy: Kannadaprabha

Facebook Auto Publish Powered By : XYZScripts.com