ಮಾರ್ಚ 1 ರಿಂದ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನವಿಲ್ಲ, ಯಾಕೆ ಗೊತ್ತಾ?.. ಇಲ್ಲಿದೆ ಮಾಹಿತಿ

ಸಿನಿಮಾ ಬಿಡುಗಡೆಯಾಗುವ ವೇಳೆಯಲ್ಲಿ ಡಿಜಿಟಲ್ ಸೇವಾ ಪೂರೈಕೆದಾರರು ಸೇವಾ ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು, ಇದು ನಿರ್ಮಾಪಕರಿಗೆ ಹೆಚ್ಚಿನ ಪ್ರಮಾಣದಲ್ಲಿನಷ್ಟವಾಗುತ್ತಿರುವುದರಿಂದ , ಈ ವಿಷಯದ ವಿರುದ್ದ ಭಾರತೀಯ ಚಿತ್ರರಂಗದ ವಾಣಿಜ್ಯ ಮಂಡಳಿಯ ಜಂಟಿ ಸಮಿತಿ ಪ್ರತಿಭಟಿಸಲು ಮುಂದಾಗಿದ್ದು, ದಕ್ಷಿಣ ಬಾರತೀಯ ಅಂದರೆ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳನ್ನು ಒಳಗೊಂಡಿರುವ ದಕ್ಷಿಣ ಭಾರತೀಯ ಚಲನಚಿತ್ರೋದ್ಯಮ, ಡಿಜಿಟಲ್ ಸೇವಾ ಪೂರೈಕೆದಾರರನ್ನು (ಡಿಎಸ್ಪಿ) ತೆಗೆದುಕೊಳ್ಳಲು ಮಾರ್ಚ್ 1 ರಿಂದ ದಕ್ಷಿಣ ಭಾರತೀಯ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ನಿಲ್ಲಿಸುವ ತೀರ್ಮಾನವನ್ನು ತೆಗೆದುಕೊಂಡಿದೆ.

ಇದೇ ತಿಂಗಳು 16 ರಂದು ಬೆಳಿಗ್ಗೆ ಚೆನೈನ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ , ದಕ್ಷಿಣ ಭಾರತೀಯ ಚಿತ್ರೋದ್ಯಮದ ಜಂಟಿ ಸಮಿತಿ ಮತ್ತು ಡಿಜಿಟಲ್ ಸೇವೆ ಪೂರೈಕೆದಾರರ ಸಭೆ ನಡೆದಿತ್ತು. ಈ ಸಭೆಯಲ್ಲಿ ಆ ವೇಳೆಯಲ್ಲಿ ಸಭೆಯಲ್ಲಿ ನಿರ್ಮಾಪಕರು ಹಾಗೂ ಡಿಜಿಟಲ್ ಸೇವಾ ಪೂರೈಕೆದಾರರ ನಡುವೆ ಒಮ್ಮತ ಬಾರದ ಹಿನ್ನಲೆಯಲ್ಲಿ ಅಂದು ಮಾರ್ಚ್ ಒಂದನೇ ದಿನಾಂಕದಿಂದ ದಕ್ಷಿಣ ಭಾರತದಲ್ಲಿ ಯಾವುದೇ ಚಿತ್ರಮಂದಿರದಲ್ಲೂ , ಯಾವುದೇ ಭಾಷೆಯ ಚಿತ್ರದ ಪ್ರದರ್ಶನವನ್ನು ನಿಲ್ಲಿಸುವುದರ ಬಗ್ಗೆ ನಿರ್ಮಾಪಕರು ಒಮ್ಮತ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ಡಿಜಿಟಲ್ ಸೇವಾ ಪೂರೈಕೆದಾರರು ನಿರ್ಮಾಪಕರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಜಾರಿಗೊಳಿಸುವವರೆಗೂ ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವುದಾಗಿ ತಿಳಿದು ಬಂದಿದೆ. ಆದರೆ ಪೆಬ್ರುವರಿ 24 ರಂದು ಬೆಂಗಳೂರಿನಲ್ಲಿ ಡಿಎಸ್ ಪಿ ಗಳೊಂದಿಗೆ ಅಂತಿಮ ಸಭೆ ನಡೆಯಲಿದೆ.

Facebook Auto Publish Powered By : XYZScripts.com