ಮಾಫ್ತಿ ನಂತರ ವಿಭಿನ್ನ ಪಾತ್ರದಲ್ಲಿ ನಟಿಸಲಿರುವ ಮುರಳಿ

ಮುಫ್ತಿ ಸಿನಿಮಾ 100 ದಿನಗಳ ಯಶಸ್ಸಿನ ನಂತರ ತಮ್ಮ ಮುಂದಿನ ಸಿನಿಮಾ ತಯಾರಿಯಲ್ಲಿದ್ದಾರೆ, ಯುಗಾದಿ ವಿಶೇಷ ದಿನದಂದು ತಮ್ಮ ಮುಂದಿನ ಸಿನಿಮಾ ಪ್ರಕಟಿಸಲಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸುಮಾರು 30 ಕಥೆಗಳು ಬಂದಿವೆ, ಕೆಲವು ನಿರ್ದೇಶಕರುಗಳ ಜೊತೆ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಅವರ ಅಭಿಮಾನಿಗಳು ಮುಂದಿನ ಪ್ರಾಜೆಕ್ಟ್ ಬಗ್ಗೆ ಕಾಯುತ್ತಿದ್ದಾರೆ, ಶೀಘ್ರದಲ್ಲೇ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೇ. ಬಹದ್ದೂರ್, ಭರ್ಜರಿ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಜೊತೆ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.ಇದರ ಜೊತೆಗೆ ಶ್ರೀ ಮುರುಳಿ ತಮ್ಮ ಸ್ನೇಹಿತನ ಜೊತೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಕೂಡ ಆರಂಭಿಸಲಿದ್ದಾರೆ. ತಮ್ಮ ಹೊಸ ಬ್ಯಾನರ್ ಅಡಿ ಹಲವು ಪ್ರಾಜೆಕ್ಟ್ ಗಳನ್ನು ಹೊರ ತರಲಿದ್ದಾರೆ, ಯುಗಾದಿ ಹಬ್ಬದಂದು ತಮ್ಮ ಹೊಸ ಯೋಜನೆಗಳ ಬಗ್ಗೆ ಘೋಷಿಸಲಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಯೋಗಿ. ಬಿ ರಾಜ್ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಬೇಕಿತ್ತು, ಆದರೆ ಅದನ್ನು ಸದ್ಯ ಮುಂದೂಡಲಾಗಿದೆ. ಸದ್ಯ ಚೇತನ್ ಕುಮಾರ್ ಅಂಬರೀಷ್ ಪುತ್ರ ಅಭಿಷೇಕ್ ಸಿನಿಮಾಗಾಗಿ ತಯಾರಿ ನಡೆಸಿದ್ದು, ಈಗ ಅದನ್ನು ತಡೆ ಹಿಡಿದಿದ್ದಾರೆ. ಇನ್ನೂ ಶ್ರೀಮುರುಳಿ ತಮ್ಮ ಮುಂದಿನ ಸಿನಿಮಾದಲ್ಲಿ ಕೌಟುಂಬಿಕ ಮನರಂಜನಾ ಸಿನಿಮಾದಲ್ಲಿ ನಟಿಸಲಿದ್ದಾರೆ, ಚಂದ್ರ ಚಕೋರಿಯಂತ ಸಿನಿಮಾದಲ್ಲಿ ಮತ್ತೆ ಅಭಿನಯಿಸಲಿದ್ದಾರೆಯ ಚಂದ್ರ ಚಕೋರಿ ಸಿನಿಮಾ ಸುಮಾರು 2 ವರ್ಷಗಳ ಕಾಲ ಪ್ರೇಕ್ಷಕರ ಮನರಂಜಿಸಿತ್ತು.

ಉಗ್ರಂ, ರಥಾವರ ಮತ್ತು ಮುಫ್ತಿ ಸಿನಿಮಾಗಳ ನಂತರ ವಿಭಿನ್ನ ಕಥೆಯಲ್ಲಿ ಮುರುಳಿ ನಟಿಸುತ್ತಿದ್ದಾರೆ, ಚಂದ್ರ ಚಕೋರಿ ಸಿನಿಮಾದಲ್ಲಿನ ಪಾತ್ರದಂತೆ ಮತ್ತೆ ಪಾತ್ರ ರೂಪಿಸುತ್ತಿದ್ದಾರೆ, ಮೇ ತಿಂಗಳಿನಿಂದ ಸಿನಿಮಾ ಶೂಟಿಂಗ್ ಆರಂಭವಾಗಿದೆ.

Facebook Auto Publish Powered By : XYZScripts.com