ಮಾದ್ಯಮಗಳ ವಿರುದ್ಧ ನಿರ್ದೇಶಕ ಬಾಲ್ಕಿ ಆಕ್ರೋಶ

ನಿರ್ದೇಶಕ ಆರ್ ಬಾಲ್ಕಿ, ತಮ್ಮ ಮುಂದಿನ ಚಿತ್ರದಲ್ಲಿ ಬಿಗ್ ಬಿ ಹಾಗೂ ಅಕ್ಷಯ್ ಕುಮಾರ್ ಅವರನ್ನು ಜೊತೆಯಾಗಿ ತೆರೆಗೆ ತರಲಿದ್ದಾರೆ. ಬಾಲ್ಕಿ ಈಗಾಗಲೇ ನಟರಿಬ್ಬರನ್ನು ಅಪ್ರೋಚ್ ಮಾಡಿದ್ದು, ಬಿಗ್ ಬಿ ಹಾಗೂ ಅಕ್ಷಯ್ ಕುಮಾರ್ ಕೂಡ ಇದಕ್ಕೆ ಒಕೆ ಎಂದಿದ್ದಾರೆ ಎಂಬಿತ್ಯಾದಿ ಗಾಪಿಸ್ ಗಳು ಕಳೆದ ಕೆಲದಿನಗಳಿಂದ ಮಾದ್ಯಗಳಲ್ಲಿ ಹರಿದಾಡುತ್ತಿದೆ.
ಆದರೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಿರ್ದೇಶಕ ಬಾಲ್ಕಿ, ತಾನು ಅಂತಹ ಯಾವುದೇ ಪ್ರೋಜೆಕ್ಟ್ ಗೆ ಕೈಹಾಕಿಲ್ಲ ಮಾದ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ತಾವು ಸದ್ಯಕ್ಕೆ ತನ್ನ ಪತ್ನಿ ಗೌರಿ ಶಿಂದೇ ನಿರ್ದೇಶಿಸುತ್ತಿರುವ ಡಿಯರ್ ಜಿಂದಗಿ ಚಿತ್ರದಲ್ಲಿ ಬ್ಯುಸಿಯಾಗಿದ್ದೇನೆ ಎಂದಿದ್ದಾರೆ.
ವಿಶೇಷವೆಂದರೆ ನಾವು ಯೋಚನೆಯೇ ಮಾಡದ ವಿಚಾರಗಳು ಮಾದ್ಯಗಳು ಹರಿದಾಡಿದ್ದು, ಇದನ್ನು ತಿಳಿದ ಅದೆಷ್ಟೋ ಮಂದಿ ನನಗೆ ಕರೆ ಮಾಡಿದಾಗಲೇ ನನಗೆ ಈ ವಿಚಾರ ತಿಳಿದಿದ್ದೂ ಎಂದು ಬಾಲ್ಕಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಡಿಯರ್ ಜಿಂದಗಿ ಚಿತ್ರ ಸಂಪೂರ್ಣಗೊಂಡ ಬಳಿಕವೇ ನಾನು ನನ್ನ ಮುಂದಿನ ಪ್ರೋಜೆಕ್ಟ್ ಬಗ್ಗೆ ಚಿಂತನೆ ನಡೆಸುವುದಾಗಿ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.
Courtesy: Balkani News

Facebook Auto Publish Powered By : XYZScripts.com