‘ಮಲ್ಟಿಫ್ಲೆಕ್ಸ್’ಗಳಲ್ಲಿ 200 ಟಿಕೆಟ್ ದರ: ಇನ್ನೆರೆಡು ದಿನಗಳಲ್ಲಿ ಅಧೀಕೃತ ಆದೇಶ

‘ಮಲ್ಟಿಫ್ಲೆಕ್ಸ್’ಗಳಲ್ಲಿ ಇನ್ಮುಂದೆ ಟಿಕೆಟ್ ದರ 200 ರೂ. ನಿಗದಿಪಡಿಸುವುದರ ಜೊತೆ ಮಲ್ಟಿಫ್ಲೆಕ್ಸ್’ಗಳಲ್ಲಿ ದಿನಕ್ಕೆ 2 ಶೋಗಳನ್ನು ಕನ್ನಡ ಚಿತ್ರ ಪ್ರದರ್ಶಿಸಲು ನಾಳೆ ಅಥವಾ ನಾಡಿದ್ದು ಸರ್ಕಾರಿ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ”ಮಲ್ಟಿಫ್ಲೆಕ್ಸ್’ಗಳಲ್ಲಿ 200 ಟಿಕೆಟ್ ದರ ಎರಡು ದಿನದಲ್ಲಿ ಅಧೀಕೃತವಾಗಿ ಸರ್ಕಾರ ಆದೇಶ ಮಾಡಲಿದೆ. ಹಾಗೆಯೇ, ಪ್ರೈಮ್ ಸಮಯದಲ್ಲಿ ಕನ್ನಡ ಚಿತ್ರಗಳಿಗಾಗಿ ಎರಡು ಶೋಗಳನ್ನ ಮೀಸಲಿಡಬೇಕು ಎಂದು ಕೂಡ ಆದೇಶಿಸುವುದಾಗಿ ತಿಳಿಸಿದರು.

ಮಾರ್ಚ್ 15 ರಂದು 2017ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮಲ್ಟಿಪ್ಲೆಕ್ಸ್’ಗಳಿಗೆ ಏಕರೀತಿಯ ಪ್ರವೇಶದರ ನೀತಿ ಆದೇಶ ಹೊರಡಿಸಿದ್ದರು. ಮೇ ತಿಂಗಳಿನಿಂದ ಈ ನೀತಿ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿತ್ತು. ಹೀಗಾಗಿ, ಇನ್ನೆರೆಡು ದಿನಗಳಲ್ಲಿ ಸರ್ಕಾರ ಅಧೀಕೃತವಾಗಿ ಘೋಷಿಸಲಿದೆ.

Courtesy: filmibeat.com

Facebook Auto Publish Powered By : XYZScripts.com