ಮಲಯಾಳಂ ನಟ ಮಮ್ಮೂಟಿ ಜೊತೆ ನಟಿಸಲಿದ್ದಾರಾ ಕಿಚ್ಚ ಸುದೀಪ್ ?

ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಂಜೀವ್ ಪಿಳ್ಳೈ ನಿರ್ದೇಶನದ ಚಿತ್ರದಲ್ಲಿ ಮಮ್ಮುಟಿ ಜೊತೆ ನಟಿಸುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಸಂಜೀವ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಮಮ್ಮುಟಿ ಯೋಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಂಗಳೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಂಬಂಧ ಸುದೀಪ್ ಅವರು ಚಿತ್ರತಂಡ ಹಾಗೂ ಮಮ್ಮುಟಿ ಅವರನ್ನು ಕೇರಳದಲ್ಲಿ ಭೇಟಿ ಮಾಡಿದ್ದ ಫೋಟೋವನ್ನು ಸುದೀಪ್ ಅವರ ಪತ್ನಿ ಪ್ರಿಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೊಡ್ ಮಾಡಿದ್ದಾರೆ.

ಬಿಗ್ ಬಜೆಟ್ ಚಿತ್ರ ಇದಾಗಿದ್ದು , ಭಾರತದ ಎಲ್ಲಾ ಭಾಷೆಗಳಿಗೂ ಡಬ್ಬಿಂಗ್ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಈ ಚಿತ್ರದಲ್ಲಿ ಬೇರೆ ಭಾಷೆಗಳ ಚಿತ್ರರಂಗದ ಜನಪ್ರಿಯ ನಟರು ನಟಿಸಲಿದ್ದಾರೆ. ಇದೀಗ ಸುದೀಪ್ ಮಮ್ಮುಟಿಯವರನ್ನು ಭೇಟಯಾಗಿರುವುದು ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಖಚಿತಗೊಂಡಂತಾಗಿದೆ.

Facebook Auto Publish Powered By : XYZScripts.com