ಮದುವೆ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ ಕಳೆದ ವರ್ಷದ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜಯನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳವಾಗಿ ಮುಸ್ತಾಫ್ ರಾಜ್ ಅವರೊಂದಿಗೆ ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹೊಸ ಜೀವನ ಆರಂಭಿಸಿರುವ ಪ್ರಿಯಾಮಣಿ ಈಗ ರಾಜಕೀಯಕ್ಕೆ ಧುಮುಕಿದ್ದಾರೆ.

ಸಿನಿಮಾ ಕಲಾವಿದರು ರಾಜಕೀಯಕ್ಕೆ ಬರೋದು ವಿಶೇಷವೇನು ಅಲ್ಲ. ಈಗಾಗಲೇ ರಮ್ಯಾ, ಅಂಬರೀಷ್, ಜಗ್ಗೇಶ್, ರಕ್ಷಿತಾ, ಶ್ರುತಿ, ಪೂಜಾ ಗಾಂಧಿ, ತಾರಾ, ಮಾಳವಿಕ ಅವಿನಾಶ್, ಶಿಲ್ಪಾ ಗಣೇಶ್, ಗೀತಾ ಶಿವರಾಜ್ ಕುಮಾರ್, ಜಯಮಾಲ ಸೇರಿದಂತೆ ಹಲವರು ನಟ-ನಟಿಯರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ.

ಇದೀಗ, ಬಹುಭಾಷಾ ನಟಿ ಪ್ರಿಯಾಮಣಿ ಈಗ ಹೊಸದಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಜನಶಕ್ತಿ ಪಕ್ಷದಿಂದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಷ್ಟಕ್ಕೂ, ಪ್ರಿಯಾಮಣಿ ರಾಜಕೀಯಕ್ಕೆ ಬರೋದು ನಿಜಾನ? ಯಾವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ? ಏನಿದು ಪ್ರಿಯಾ ಬಗ್ಗೆ ಹೊಸ ಸುದ್ದಿ ಎಂದು ತಿಳಿದುಕೊಳ್ಳಲು ಮುಂದೆ ಓದಿ…..

ರಾಜಕೀಯಕ್ಕೆ ಪ್ರಿಯಾಮಣಿ
ಜನಶಕ್ತಿ ಪಕ್ಷದ ಅಭ್ಯರ್ಥಿಯಾದ ಪ್ರಿಯಾಮಣಿ

ಅಶೋಕ್ ಕಶ್ಯಪ್ ನಿರ್ದೇಶನ ಮಾಡುತ್ತಿರುವ ‘ಧ್ವಜ’ ಚಿತ್ರದಲ್ಲಿ ಪ್ರಿಯಾಮಣಿ ನಟಿಸುತ್ತಿರುವುದು ಗೊತ್ತಿರುವ ವಿಚಾರ. ಇದೊಂದು ರಾಜಕೀಯ ಸುತ್ತ ತಯಾರಾಗಿರುವ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಪ್ರಿಯಾಮಣಿ ಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

 

ಧ್ವಜ ಪೋಸ್ಟರ್
ಗಮನ ಸೆಳೆಯುತ್ತಿದೆ ಪೋಸ್ಟರ್

‘ಧ್ವಜ’ ಚಿತ್ರದ ಪೋಸ್ಟರ್ ಗಳು ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ನಿಜ ಜೀವನದ ರಾಜಕಾರಣಿಯಂತೆ ಸೀರೆಯುಟ್ಟು, ಕೈ ಮುಗಿದು ಪೋಸ್ ಕೊಟ್ಟಿರುವ ಪ್ರಿಯಾಮಣಿ ಅವರ ಗೆಟಪ್ ಮೋಡಿ ಮಾಡುತ್ತಿದೆ.

 

ಬಿಡುಗಡೆ ಸಜ್ಜಾಗಿದೆ
ಚಿತ್ರೀಕರಣ ಕಂಪ್ಲೀಟ್

ಸುಧಾ ಬಸವೇಗೌಡ ರವರು ನಿರ್ಮಾಣ ಮಾಡುತ್ತಿರುವ ಧ್ವಜ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸದ್ಯ, ಪೋಸ್ಟರ್ ಗಳ ಮೂಲಕ ಆಕರ್ಷಣೆ ಮಾಡುತ್ತಿರುವ ಈ ಸಿನಿಮಾ ಆದಷ್ಟೂ ಬೇಗ ತೆರೆಕಾಣಲಿದೆ.

 

ತಾಂತ್ರಿಕ ತಂಡ
ಪ್ರತಿಭಾನ್ವಿತ ಕಲಾವಿದರ ‘ಧ್ವಜ’

ಪ್ರಿಯಾಮಣಿ ಜೊತೆಯಲ್ಲಿ ರವಿ ಗೌಡ ಹಾಗೂ ದಿವ್ಯ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಟಿ.ಎನ್ ಸೀತಾರಾಮ್, ತಬಲ ನಾಣಿ, ವೀಣಾ ಸುಂದರ್ ಕೂಡ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣ್ ಅವರ ಸಂಗೀತ ಮತ್ತು ಮಂಜು ಮಾಂಡವ್ಯ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

 

Facebook Auto Publish Powered By : XYZScripts.com