ಮತ್ತೆ ಹುಚ್ಚನಾಗೋಕೆ ಸಿದ್ಧನಾದ ಬಿಟೌನ್​ ಬಾಕ್ಸಾಫೀಸ್​ ‘ಸುಲ್ತಾನ್’

ಬಿಟೌನಲ್ಲಿ ಒಂದು ಚಿತ್ರ ಸೂಪರ್ ಹಿಟ್ ಆದ್ರೆ ಸಾಕು ನೆಕ್ಸ್ಟ್ ಅದೇ ಚಿತ್ರದ ಸೀಕ್ವೆಲ್ಗಳು ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ವೆ. ಇದೀಗ 13 ವರ್ಷದ ನಂತ್ರ ಹ್ಯಾಡ್ಸಂ ಹಂಕ್ ಸಲ್ಮಾನ್ ಖಾನ್ ಅಭಿನಯದ ಚಿತ್ರದ ಸೀಕ್ವೆಲ್ ಕೂಡ ಮತ್ತೆ ತೆರೆ ಮೇಲೆ ಬರೋಕೆ ಸಿದ್ಧವಾಗಿದೆ..
ಹೌದು, 2003 ರಲ್ಲಿ ಸೂಪರ್ ಹಿಟ್ಟಾದ ತೇರೆ ನಾಮ್ ಚಿತ್ರದ ಸೀಕ್ವೆಲ್ ಅನ್ನ ತೆರೆ ಮೇಲೆ ತರೋಕೆ ಬಾಲಿವುಡ್ನಲ್ಲಿ ಎಲ್ಲಾ ಸಿದ್ಧತೆ ನಡೆಯುತ್ತಿದೆ.. ಬಿಟೌನ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ ತೇರೆ ನಾಮ್ 13 ವರ್ಷದ ಹಿಂದೆ ಸಕತ್ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಪ್ರೀತಿಗೆ ಬಿದ್ದು, ಹುಚ್ಚನಾಗೋ ಪಾತ್ರ ಮಾಡಿದ್ರು. ಇದೀಗ ಮತ್ತೆ ತೇರೆ ನಾಮ್-2 ಚಿತ್ರ ಬರೋಕೆ ರೆಡಿಯಾಗಿದೆ.
ವಿಶೇಷ ಅಂದ್ರೆ ತೇರೆ ನಾಮ್-2ಗಾಗಿ ಸಲ್ಮಾನ್ ಖಾನ್ 15 ವಿಭಿನ್ನ ಲವ್ ಸ್ಟೋರಿಗಳನ್ನ ರೆಡಿಮಾಡಲಾಗಿದ್ಯಂತೆ. ಈಗಿನ ಜನರೇಷನ್ಗೆ ಯಾವ ಸ್ಟೋರಿ ಸೂಟ್ ಆಗುತ್ತೋ ಅದ ಕಥೆಯನ್ನ ಆಯ್ಕೆ ಮಾಡಿ ಸಿನಿಮಾ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿದೆ.. ತೇರೆ ನಾಮ್-2 ಚಿತ್ರಕ್ಕೆ ಸತೀಶ್ ಕೌಷಿಕ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ..
Courtesy: Balkani News

Facebook Auto Publish Powered By : XYZScripts.com