ಮತ್ತೆ ಮಮ್ಮಿ ಆಗ್ತಾ ಇದ್ದಾರೆ ಪ್ರಿಯಾಂಕ ಉಪೇಂದ್ರ!

ನಟಿ ಪ್ರಿಯಾಂಕ ಉಪೇಂದ್ರ ಬಹಳ ವರ್ಷಗಳ ನಂತರ ‘ಮಮ್ಮಿ ಸೇವ್ ಮಿ’ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡಿದರು.ಆ ಸಿನಿಮಾ ಹಿಟ್ ಆದ ಮೇಲೆ ಪ್ರಿಯಾಂಕ ಅವರು ಸಾಕಷ್ಟು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ.

ಈ ನಡುವೆ ಈಗ ಯೋಗಿ ದೇವಗಂಗೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

ಈ ಸಿನೆಮಾದ ಇನ್ನೊಂದು ವಿಶೇಷ ಏನಪ್ಪ ಅಂದ್ರೆ, ಉಪೇಂದ್ರ ಅವರ ಸೋದರಳಿಯ ನಿರಂಜನ್ ಕೂಡ ಸ್ಯಾಂಡಲ್’ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾನೆ. ಇದೇ ಮೊದಲ ಬಾರಿಗೆ ಪ್ರಿಯಾಂಕಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನೂ ಈ ಸಿನಿಮಾ ಮುಗಿದ ನಂತರ ನಂತರ ಈಗ ಪ್ರಿಯಾಂಕ ಮತ್ತೆ ಮಮ್ಮಿ ಆಗುವ ಯೋಜನೆ ಹಾಕಿಕೊಂಡಿದ್ದಾರೆ.

‘ಮಮ್ಮಿ ಸೇವ್ ಮಿ’ ಸಿನೆಮಾದ ನಿರ್ದೇಶಕ ಲೋಹಿತ್ ಅವರೊಂದಿಗೆ ಎರಡನೇ ಸಿನೆಮಾ ಮಾಡಲು ಸಿದ್ಧತೆ ನಡೆಸುತ್ತಿದ್ದಾರಂತೆ.

ನನ್ನ ಮುಂದಿನ ಸಿನೆಮಾ ಲೋಹಿತ್ ಅವರೊಂದಿಗೆ.

ಇದು ಸಾಮಾಜಿಕ ಕಥೆ. ಈ ವರ್ಷದ ಅಂತ್ಯಕ್ಕೆ ಅವರದ್ದೇ ನಿರ್ದೇಶನದಲ್ಲಿ ‘ಮಮ್ಮಿ..’ ಎರಡನೇ ಭಾಗ ಪ್ರಾರಂಭವಾಗಲಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ‘ಮಮ್ಮಿ..’ ಸಿನೆಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಜೊತೆಗೆ ತೆಲುಗಿನಲ್ಲಿ ‘ಚಿನ್ನಾರಿ’ಯಾಗಿಯೂ ಬಿಡುಗಡೆಯಾಗಿತ್ತು.

Courtesy: Kannada news Now

Facebook Auto Publish Powered By : XYZScripts.com