ಮತ್ತೆ ನಿರ್ದೇಶನ ಮಾಡಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ.. ಯಾವ ಚಿತ್ರ? ಇಲ್ಲಿ ಓದಿ

‘ಉಪ್ಪಿ-2’ ಚಿತ್ರದ ಯಶಸ್ಸಿನ ನಂತರ ಉಪೇಂದ್ರ ಯಾವ ಚಿತ್ರವನ್ನೂ ನಿರ್ದೇಶನ ಮಾಡಲಿಲ್ಲ. ಹೀಗಾಗಿ ಇವರು ಮತ್ತೆ ಯಾವಾಗ ಸಿನಿಮಾ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ರಿಯಲ್ ಸ್ಟಾರ್ ಮತ್ತೆ ನಿರ್ದೇಶಕನ ಕ್ಯಾಪ್ ಹಾಕುತ್ತಿದ್ದಾರೆ. ಹೀಗೊಂದು ಸುದ್ದಿ ಈಗ ಸಾಮಾಜಿಕ ಜಾಲತಾಣ ಮತ್ತು ಅವರ ಆಪ್ತ ಅಭಿಮಾನಿ ಬಳಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ವಿಷಯವನ್ನು ಖುದ್ದು ಉಪೇಂದ್ರ ಅವರೇ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಉಪೇಂದ್ರ ಮತ್ತೆ ಸಿನಿಮಾ ನಿರ್ದೇಶನ ಮಾಡುವುದಾದರೆ, ಅದು ಯಾವ ರೀತಿ ಸಿನಿಮಾ ಮಾಡಲಿದ್ದಾರೆ, ಯಾವಾಗ ಆರಂಭ, ಎಂಬ ಇನ್ನಿತರ ಪ್ರಶ್ನೆಗಳು ಈಗ ಕಾಡುತ್ತಿದೆ. ಇನ್ನು ಈ ವಿಷಯದ ಬಗ್ಗೆ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಸದ್ಯ ‘ಪ್ರಜಾಕೀಯ’ದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ತಯಾರಿ ಮಾಡ್ತಿದ್ದಾರೆ. ಈ ಮಧ್ಯೆ ಸಿನಿಮಾಗಳನ್ನುಕೂಡ ಮ್ಯಾನೇಜ್ ಮಾಡುತ್ತಿದ್ದಾರೆ.

ಏನೇ ಬೆಳವಣಿಗೆ ಆದರೂ, ಉಪ್ಪಿ ಫ್ಯಾನ್ಸ್ ಗೆ ರಿಯಲ್ ಥ್ರಿಲ್ಲ್, ಖುಷಿ ಕೊಡುವುದು ಮಾತ್ರ ಅವರು ನಿರ್ದೇಶನ ಮಾಡಿದಾಗ.

Facebook Auto Publish Powered By : XYZScripts.com