ಮಜಾ ಟಾಕೀಸ್’ನಲ್ಲಿ ಡಾ.ರಾಜ್ ವಿಶೇಷ : ಭಕ್ತಪ್ರಹ್ಲಾದನಾಗಿ ಕುರಿ ಪ್ರತಾಪ್!

ಕಲರ್ಸ್ ಕನ್ನಡ ವಾಹಿನಿಯ ಫೇಮಸ್ ರಿಯಾಲಿಟಿ ಶೋ ಶೋ ‘ಮಜಾ ಟಾಕೀಸ್’. ಈ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಡಾ.ರಾಜ್ ಸ್ಪೆಷಲ್ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಹೌದು ಏಪ್ರಿಲ್ 22 ಮತ್ತು 23ರಂದು ರಾತ್ರಿ 8 ಗಂಟೆಗೆ ಪ್ರಸಾರ ಮಾಡಲಾಗುತ್ತಿದೆ.ಈ ವಿಶೇಷ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಹೊನ್ನವಳ್ಳಿ ಕೃಷ್ಣ, ಬರಗೂರು ರಾಮಚಂದ್ರಪ್ಪ ಹಾಗೂ ಟಿ.ಎಸ್.ನಾಗಾಭರಣ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಇನ್ನಷ್ಡು ಹೆಚ್ಚು ಮಾಡಲಿದ್ದಾರೆ.ಇಡೀ ಮಜಾ ಟಾಕೀಸ್ ತಂಡ ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್ ಸಮಾಧಿಗೆ ಹೋಗಿ ಪೂಜೆ ಸಲ್ಲಿಸಿ ಶೂಟಿಂಗ್ ಶುರು ಮಾಡಿದ್ದಾರೆ.

ಎಲ್ಲರೂ ರಾಜ್ ಸಿನಿಮಾಗಳ ಪಾತ್ರಗಳಲ್ಲಿ ಕಾಣಿಸಿಕೊಂಡು ರಂಜಿಸಲಿದ್ದಾರೆ.ಮಂಡ್ಯ ರಮೇಶ್ ಮಯೂರನ ಗೆಟಪ್ ಹಾಕಿದ್ರೆ, ಅಪರ್ಣಾ ಅವರು ದುರ್ಗಿ ಅವತಾರವಾದಲ್ಲಿ ಕಾಣಿಸಿಕೊಂಡಿದ್ದಾರೆ.

ಭಕ್ತಪ್ರಹ್ಲಾದನಾಗಿ ಕುರಿ ಪ್ರತಾಪ್ ಕಾಣಿಸಿಕೊಂಡು ನಗೆಯ ಕಮಾಲ್ ಮಾಡಲಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com