ಮಂಡ್ಯ : ನಟ ನೀನಾಸಮ್ ಸತೀಶ್ ಕಾರು ಅಪಘಾತ

ಮಂಡ್ಯ : ಸ್ಯಾಂಡಲ್ ವುಡ್ ನಟ ನೀನಾಸಂ ಸತೀಶ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿರಲಿಲ್ಲ ಅಂತ ತಿಳಿದು ಬಂದಿದೆ.

ಸತೀಶ್ ಅವರ ಮೇಕಪ್ ಮ್ಯಾನ್, ಚಾಲಕ ಹಾಗೂ ಕೆಲವು ಸಹಚರರು ಅವಘಡಕ್ಕೆ ಈಡಾದ ಕಾರಿನಲ್ಲಿದ್ದರು. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಾಳಾಗಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಯೋಗ್ಯ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಡ್ಯ ಬಳಿಗೆ ಸತೀಶ್ ಹೋಗಿದ್ದರು ಅಂತ ತಿಳಿಸಿದ್ದಾರೆ. ಅಪಘಾತವಾದ ಕಾರು ಸಂಪೂರ್ಣ ನಜ್ಜುಗಜ್ಜಾಗಿದ್ದು ಅಪ ಘಾತಕ್ಕೆ ಈಡಾದ ಕಾರಿನಲ್ಲಿದ್ದವರು ಪ್ರಾಣ ಉಳಿಸಿಕೊಂಡಿರುವುದು ಆಶ್ಚರ್ಯ ತಂದಿದೆ ಅಂತ ಸ್ಥಳದಲ್ಲಿದ್ದ ಜನತೆ ಹೇಳಿದ್ದಾರೆ.

Facebook Auto Publish Powered By : XYZScripts.com