ಮಂಚಕ್ಕೆ ಕರೆಯೋ ಕಾಯಿಲೆಗೆ ಹುಡುಗೀರೂ ಕಾರಣ: ಹರಿಪ್ರಿಯಾ

ಇತ್ತೀಚೆಗೆ ದೆಹಲಿಯಲ್ಲಿ ನಡೆದೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರುತಿ ಹರಿಹರನ್ ತನ್ನನ್ನು ಕನ್ನಡದ ನಿರ್ಮಾಪಕನೊಬ್ಬ ಮಂಚಕ್ಕೆ ಕರೆದಿದ್ದ ಎಂಬರ್ಥದಲ್ಲಿ ಮಾತಾಡಿ ವಿವಾದ ಎಬ್ಬಿಸಿದ್ದರು. ಹೀಗೆ ಕನ್ನಡ ಚಿತ್ರ ರಂಗದ ಬಗ್ಗೆ ದೆಹಲಿಯಲ್ಲಿ ನಿಂತು ಮಾತಾಡಿ ಕಾಸ್ಟಿಂಗ್ ಕೌಚ್ ಪೀಡೆ ಕನ್ನಡದಲ್ಲಿ ಅತಿಯಾಗಿದೆ ಎಂಬಂತೆ ಹುಯಿಲೆಬ್ಬಿಸಿದ್ದಳು. ಶ್ರುತಿಯ ಈ ನಡವಳಿಕೆಯ ಬಗ್ಗೆ ತೀವ್ರವಾದ ವಿವಾದವೆದ್ದು ಆ ಬಗ್ಗೆ ನಾನಾ ದಿಕ್ಕಿನಲ್ಲಿ ಚರ್ಚೆಗಳೂ ಆಗಿದ್ದವು. ಆದರೆ ನಟೀಮಣಿಯರು ಇಂಥಾದ್ದರ ಬಗ್ಗೆ ಆಗಾಗ ಮಾತಾಡುತ್ತಲೇ ಇರುತ್ತಾರೆ. ಆದರೆ ಇಂಥಾ ದುಷ್ಟತನಕ್ಕೆ ನಟಿಯರೂ ಒಂದು ಕಾರಣವೆಂಬ ಸೂಕ್ಷ್ಮತೆ ವಿವಾದ, ವಾಗ್ವಾದಗಳ ಭರಾಟೆಯಲ್ಲಿ ಸತ್ತೇ ಹೋದಂತಾಗುತ್ತದೆ!

ಅಂಥಾದ್ದೊಂದು ಸೂಕ್ಷ್ಮ ವಿಚಾರದತ್ತ ಓರ್ವ ಮುಖ್ಯ ನಟಿಯಾಗಿ ಹರಿಪ್ರಿಯಾ ಬಿಚ್ಚುಮನಸಿನಿಂದ ಮಾತಾಡಿದ್ದಾರೆ. ಈ ಮೂಲಕ ನಟಿಯರನ್ನು ಮಂಚ ಹತ್ತಿಸಿಕೊಳ್ಳೋ ಕಾಮಾಂಧ ಮನಸ್ಥಿತಿಗೆ ನಟಿಯರೂ ಹೇಗೆ ಕಾರಣವಾಗುತ್ತಾರೆಂಬ ವಿಚಾರವನ್ನೂ ಹರಿಪ್ರಿಯಾ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ!

ನಾವು ಹೇಗಿರುತ್ತೇವೆ ಅನ್ನೋದರ ಮೇಲೆ ನಮ್ಮ ಅನುಭವಗಳು ಆಧರಿಸಿರುತ್ತವೆ. ನನಗಂತೂ ಕನ್ನಡ ಚಿತ್ರರಂಗದಲ್ಲಿ ಕೌಚಿಂಗ್ ಕಾಸ್ಟ್ನಂಥಾ ಕೆಟ್ಟ ಅನುಭವಗಳು ಖಂಡಿತಾ ಆಗಿಲ್ಲ. ಯಾಕಂದ್ರೆ ನಾವು ಹೇಗೆ ನಡೆದುಕೊಳ್ತೇವೋ ಎದುರಿನವರೂ ಹಾಗೇ ವರ್ತಿಸ್ತಾರೆ. ಕೆಲವೊಮ್ಮೆ ಹುಡುಗೀರೇ ಅವಕಾಶದ ಆಸೆಗೆ ಬಿದ್ದು ಇಂಥಾ ಅನಿಷ್ಟವನ್ನು ಮೈಮೇಲೆಳೆದುಕೊಳ್ಳೋ ಸಂದರ್ಭಗಳೂ ಇರಬಹುದು. ಅದನ್ನೇ ಬಳಸಿಕೊಳ್ಳೋ ಮನಸ್ಥಿತಿಗಳೂ ಇರಬಹುದು. ಹಾಗಂತ ಅದೇ ಸಾರ್ವತ್ರಿಕ ಅನ್ನುವಂತೆ ಬಿಂಬಿಸಲಾಗೋದಿಲ್ಲ ಅನ್ನೋದು ಹರಿಪ್ರಿಯಾ ಅವರ ಸ್ಪಷ್ಟ ಅಭಿಪ್ರಾಯ!

ಇಂಥಾದ್ದೊಂದು ದಿಟ್ಟ ಮತ್ತು ವಾಸ್ತವಕ್ಕೆ ಹತ್ತಿರಾದ ಅಭಿಪ್ರಾಯ ಹಂಚಿಕೊಂಡಿರೋ ಹರಿಪ್ರಿಯಾ ಇದು ಶ್ರುತಿ ಹರಿಹರನ್ ಅಭಿಪ್ರಾಯಕ್ಕೆ ಉತ್ತರವಲ್ಲ ಅಂತಲೂ ಒತ್ತಿ ಹೇಳಿದ್ದಾರೆ. ಆದರೆ ಓರ್ವ ನಟಿಯಾಗಿ ಈಕೆ ಹೇಳಿದ್ದರಲ್ಲಿ ಖಂಡಿತಾ ಅರ್ಥವಿದೆ ಎಂಬ ಮಾತುಗಳೇ ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿವೆ. ಈ ಅಭಿಪ್ರಾಯವನ್ನು ಬಿಡು ಬೀಸಾಗಿ ಹೇಳುವ ಮೂಲಕ ಹರಿಪ್ರಿಯಾ ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಅಂದಹಾಗೆ, ಹರಿಪ್ರಿಯಾ ಇಮೇಜುಗಳಾಚೆಗೆ ಪಾತ್ರವನ್ನು ಪಾತ್ರದಂತೆಯೇ ಪರಿಗಣಿಸಿ ನಟಿಸೋ ನಟಿ. ಆಕೆಯ ವೃತ್ತಿಪರತೆಗೆ ನೀರ್ದೋಸೆ ಚಿತ್ರದ ಪಾತ್ರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಇಂಥಾ ಹರಿಪ್ರಿಯಾ ಬೆಲ್ ಬಾಟಮ್ ಚಿತ್ರದಲ್ಲಿ ಎಂಬತ್ತರ ದಶಕದ ಚೆಂದದ, ಸವಾಲಿನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಈ ಚಿತ್ರದಲ್ಲಿ ನಿರ್ದೇಶಕ ವೃಷಬ್ ಶೆಟ್ಟಿ ಎಂಬತ್ತರ ದಶಕದ ಪತ್ತೇದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದ ಮಟ್ಟಿಗೆ ಅತ್ಯಂತ ವಿರಳವಾದ ಪತ್ತೇದಾರಿ ಕಥಾ ಹಂದರ ಹೊಂದಿರೋ ಈ ಚಿತ್ರವನ್ನು ಬೇರೆಯದ್ದೇ ಫ್ಲೇವರಿನಲ್ಲಿ ಕಟ್ಟಿಕೊಡಲು ನಿರ್ದೇಶಕ ಜಯತೀರ್ಥ ಸಜ್ಜಾಗಿದ್ದಾರೆ.

Facebook Auto Publish Powered By : XYZScripts.com