ಭಾರತೀಪುರ ಕ್ರಾಸ್ ನಲ್ಲಿ ಕಿಚ್ಚನ ತಾಳ್ಮೆ ಪಾಠ

ದಿನ ಬೆಳಗಾದರೇ ಸಾಕು ಅನುಭವಕ್ಕಾಗಿ ಕಿರುಚಿತ್ರಗಳನ್ನ ನಿರ್ದೇಶನ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವ ಅನೇಕಮಂದಿ ಸಿಗುತ್ತಾರೆ. ಸಾವಿರದಲ್ಲಿ ಒಂದರಂತೆ ಕೆಲ ಕಿರು ಚಿತ್ರಗಳು ಮಾತ್ರ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡು ಬಿಡುತ್ತವೆ.

ನೋಡುಗರ ಮನಸ್ಸಿನಲ್ಲಿ ಹಾಗೆ ಉಳಿದುಕೊಂಡು ಬಿಡುವ ಕಿರುಚಿತ್ರ ಭಾರತೀಪುರ ಕ್ರಾಸ್. ಟೀಸರ್ ನಿಂದಲೇ ಕುತೂಹಲ ಮೂಡಿಸಿದ್ದ ಭಾರತೀಪುರ ಕಿರುಚಿತ್ರ ಇತ್ತಿಚಿಗಷ್ಟೇ ಬಿಡುಗಡೆ ಆಗಿದೆ.

ಅಭಿಮಾನಿಗಳಿಗೆ ಕೌತುಕ ಮೂಡಿಸಿದ ದರ್ಶನ್ ಬಗೆಗಿನ ಸುದೀಪ್ ಮಾತು

ಕಿರುಚಿತ್ರದಲ್ಲಿ ಉತ್ತಮ ಸಂದೇಶದ ಜೊತೆಯಲ್ಲಿ ಕಿಚ್ಚನ ನೀತಿ ಪಾಠ ಇದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಎಲ್ಲೆಡೆ ವೈರಲ್ ಆಗಿರುವ ಈ ಶಾರ್ಟ್ ಫಿಲ್ಮಂ ನಲ್ಲಿ ಅಂತದ್ದೇನಿದೆ. ಭಾರತೀಪುರದಲ್ಲಿ ಸುದೀಪ್ ಪಾತ್ರವೇನು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ

ಸಿನಿಮಾ ವರದಿಗಾರ ಹಾಗೂ ಸಂಗೀತ ರಚನೆಕಾರ ವಿಜಯ್ ಭರಮಸಾಗರ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಿರುಚಿತ್ರ ಭಾರತೀಪುರ ಕ್ರಾಸ್. ನಿಖಿಲ್ ಸೂರ್ಯ ನಾಯಕನಾಗಿ ಕಾಣಿಸಿಕೊಂಡಿದ್ದು ನಾಯಕಿಯಾಗಿ ಪೂಜಾ ಹುಣಸೂರು ಅಭಿನಯಿಸಿದ್ದಾರೆ ಮತ್ತೊಂದು ಪಾತ್ರದಲ್ಲಿ ದೀಪಕ್ ಕಾಣಿಸಿಕೊಂಡಿದ್ದಾರೆ.

20 ನಿಮಿಷಗಳಿರುವ ಭಾರತೀಪುರ ಕ್ರಾಸ್ ಕಿರುಚಿತ್ರವನ್ನ ಮಲೆನಾಡಿನ ಸುಂದರತಾಣಗಳ ಮಧ್ಯೆ ಚಿತ್ರೀಕರಿಸಲಾಗಿದೆ. ಅದ್ದೂರಿ ನಿರ್ಮಾಣದಲ್ಲಿ ಕಿರುಚಿತ್ರ ತಯಾರಾಗಿದ್ದು ಸಿನಿಮಾರಂಗದಲ್ಲಿ ಕೆಲಸ ಮಾಡಿರುವ ನುರಿತ ತಂತ್ರಜ್ಞರು ಭಾರತೀಪುರಕ್ಕೆ ಕೆಲಸ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಯುವಕರಿಗೆ ಒಂದು ಒಳ್ಳೆ ಸಂದೇಶವನ್ನ ತಲುಪಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಭಾರತೀಪುರ ಕಿರುಚಿತ್ರಕ್ಕೆ ಕಿಚ್ಚ ಸುದೀಪ್ ಹಿನ್ನಲೆ ಧ್ವನಿಯನ್ನ ನೀಡಿದ್ದಾರೆ. ಜೀವ ಹಾಗೂ ಜೀವನದ ಮೌಲ್ಯದ ಬಗ್ಗೆ ಕಿಚ್ಚ ಅದ್ಬುತವಾದ ಮಾತುಗಳನ್ನಾಡಿದ್ದಾರೆ.

ಡಿಸಿಎ ಬ್ರದರ್ಸ್ ನಿರ್ಮಿಸಿರುವ ಭಾರತೀಪುರ ಕಿರುಚಿತ್ರವನ್ನ ಯೂಟ್ಯೂಬ್ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದ್ದಾರೆ. ಅದರ ಜೊತೆಯಲ್ಲಿ ಶಾರ್ಟ್ ಫಿಲ್ಮ ನೋಡಿ ಮೆಚ್ಚಿಕೊಂಡಿದ್ದಾರೆ.

Facebook Auto Publish Powered By : XYZScripts.com