ಭರ್ಜರಿ 50 ಕೋಟಿ ಕಲೆಕ್ಷನ್‌ ಬೋಗಸ್‌?… ಇಲ್ಲಿ ಓದಿ

“ಯಾರ್ರೀ ಹೇಳಿದ್ದು? “ಭರ್ಜರಿ’ ಕಲೆಕ್ಷನ್‌ 50 ಪ್ಲಸ್‌ ಕೋಟಿ ಅಂತ? ಅದೆಲ್ಲಾ ಬೋಗಸ್‌. ನಿಜ ಹೇಳ್ತೀನಿ, ಭರ್ಜರಿ ಕಲೆಕ್ಷನ್‌ ಬೋಗಸ್‌. ನನಗೆ ಅದರಿಂದ ಬಂದ ಲಾಭ ಕೇವಲ ಎರಡುವರೆಯಿಂದ ಮೂರು ಕೋಟಿ ಮಾತ್ರ!  ಹೀಗೆ ಹೇಳಿದ್ದು, ಬೇರಾರು ಅಲ್ಲ, “ಭರ್ಜರಿ’ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್‌. ಆ ಚಿತ್ರ 50 ಪ್ಲಸ್‌ ಕೋಟಿ ಕಲೆಕ್ಷನ್‌ ಆಯ್ತು ಅಂತೆಲ್ಲಾ ಸುದ್ದಿಯಾದ ಕುರಿತು, ಪತ್ರಕರ್ತರಿಗೆ ಸ್ಪಷ್ಟಪಡಿಸಿದ್ದು ಹೀಗೆ.

“ಸಿನಿಮಾ ಗೆಲುವು ಕಂಡಿದ್ದು ನಿಜ. ನಾನು ಆ ಚಿತ್ರಕ್ಕೆ ಖರ್ಚು ಮಾಡಿದ್ದ ಹಣದ ಮೇಲೆ ಎರಡುವರೆಯಿಂದ ಮೂರು ಕೋಟಿ ರುಪಾಯಿ ಲಾಭ ಬಂದಿದ್ದು ಬಿಟ್ಟರೆ, ಬೇರೆ ಎಂಥದ್ದೂ ಇಲ್ಲ. ನಿಮಗೆ 50 ಪ್ಲಸ್‌ ಕೋಟಿ ಗಳಿಕೆ ಆಗಿದ್ದು ಅಂತ ಹೇಳಿದ್ದು ಯಾರು? ಯಾರೋ, ಹೇಳಿಬಿಟ್ಟರೆ ಅದು ಸರೀನಾ? ನಿರ್ಮಾಪಕ ನಾನು. ಸಿನಿಮಾದ ಗಳಿಕೆ ಬಗ್ಗೆ ಹೇಳಬೇಕಾದವನು ನಾನು. ಈಗಲೂ ಹೇಳ್ತೀನಿ. ಆ ಚಿತ್ರದಿಂದ ಬಂದ ಲಾಭ ಕೇವಲ ಮೂರು ಕೋಟಿ ಅಷ್ಟೇ.

ಬೇರೆ ಲೆಕ್ಕವೆಲ್ಲವೂ ಬೋಗಸ್‌’ ಎಂದು ಸ್ಪಷ್ಟಪಡಿಸುತ್ತಾರೆ ಕನಕಪುರ ಶ್ರೀನಿವಾಸ್‌.

Facebook Auto Publish Powered By : XYZScripts.com