ಬ್ರೇಕಿಂಗ್ : ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗ ಖ್ಯಾತ ಹಿರಿಯ ನಟ ಹಾಗೂ ನಿರ್ದೇಶಕ ಕಾಶಿನಾಥ್ ಅವರು ಗುರುವಾರ ವಿಧಿವಶರಾಗಿದ್ದಾರೆ.

ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕಾಶಿನಾಥ್ ಅವರು ಕಳೆದೆರಡು ದಿನಗಳಿಂದ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ.

ತಮ್ಮ ಅಮೋಘ ಅನುಭವದ ಮೂಲಕ ಕನ್ನಡ ಚಿತ್ರರಸಿಕರಿಗೆ ಕಾಶಿನಾಥ್ ಅವರು ಹತ್ತಿರವಾಗಿದ್ದರು. ಕನ್ನಡ ಚಿತ್ರರಂಗದ ಪ್ರತಿಭಾನ್ವಿಟ ನಟ ಹಾಗೂ ನಿರ್ದೇಶಕರಾಗಿರುವ ಕಾಶಿನಾಥ್ ಅವರು, ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು.

ಉಪೇಂದ್ರ, ಮನೋಹರ್, ಸುನಿಲ್ ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದ ಕಾಶಿನಾಥ್ ಅವರು ತಮ್ಮ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ಕೈಚಳಕ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ ಚಿತ್ರಗಳು ಕಾಶಿನಾಥ್ ಅವರ ಪ್ರಮುಖ ಚಿತ್ರಗಳಾಗಿದ್ದು, ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯತೆಯನ್ನು ಗಳಿಸಿತ್ತು,

Facebook Auto Publish Powered By : XYZScripts.com