ಬ್ಯಾಂಕಾಕ್ ಹೋಗಿದ್ದಾರಂತೆ ಜೆಕೆ.ಯಾಕ್ ಗೊತ್ತಾ.?

ಸಿನಿಮಾಗಳಲ್ಲಿ ಖತರ್ನಾಕ್ ವಿಲನ್ ಆಗಿ ಕಾಣಿಸಿಕೊಂಡು ನಂತರ ಕಿರುತೆರೆಯಲ್ಲಿ ಮಿಂಚು ಹರಿಸಿ ಸ್ಯಾಂಡಲ್ ವುಡ್ ನಲ್ಲಿ ಒಂದು ರೇಂಜಿಗೆ ಹವಾ ಮಾಡಿದ್ದ ನಟ ಜೆಕೆ ಅಲಿಯಾಸ್ ಜಯಕಾರ್ತಿಕ್. ಹೌದು ಸಾಕಷ್ಟು ಸಿನಿಮಾಗಳಲ್ಲಿ ಈತನಿಗೆ ಸಿಕಿದ್ದು ಖಡಲ್ ವಿಲನ್ ಪಾತ್ರ . ಆದ್ರೆ ಇದೀಗ ಹೊಸ ಸಿನಿಮಾವೊಂದರಲ್ಲಿ ಜೆಕೆ ಕಾಣಿಸಿಕೊಳ್ಳಲಿದ್ದಾರೆ.

ಯೆಸ್..ಸದ್ಯಕ್ಕೆ ಜೆಕೆ ಅಲಿಯಾಸ್ ಜಯಕಾರ್ತಿಕ್ ಬ್ಯಾಂಕಾಕ್ನಲ್ಲಿ ಬೀಡುಬಿಟ್ಟಿದ್ದಾರೆ. ನಾಗೇಂದ್ರ ಅರಸ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅವರು ನಟಿಸುತ್ತಿದ್ದು, ಈ ಚಿತ್ರದ ಶೂಟಿಂಗ್ ಅಲ್ಲಿನ ಹಲವು ಆಕರ್ಷಣೀಯ ಸ್ಥಳಗಳಲ್ಲಿ ನಡೆಯುತ್ತಿದೆಯಂತೆ.

ಜರಾಸಂಧ ಚಿತ್ರದಲ್ಲಿ ವಿಜಯ್ ಜತೆ ಕಾರ್ತಿಕ್ ಖಳ ನಾಯಕನಾಗಿ ಗುರುತಿಸಿಕೊಂಡಿದ್ದರು. ಜಾನಿ ಮೇರಾ ನಾಮ್ ಚಿತ್ರದಲ್ಲೂ ರಮ್ಯಾಗೆ ಮೋಸ ಮಾಡಿ ಓಡಿ ಹೋಗುವ ಪಾತ್ರ ಮಾಡಿದ್ದರು. ಸುದೀಪ್ ಅಭಿನಯದ ಬಹುತೇಕ ಚಿತ್ರಗಳಲ್ಲಿ ಕಾರ್ತಿಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟ ಕಾರ್ತಿಕ್ ಧಾರಾವಾಹಿ ಪ್ರೇಕ್ಷಕ ಪ್ರಭುಗಳ ಮನಸ್ಸು ಗೆದ್ದಿದ್ದರು.

Courtesy: Kannada News Now

Facebook Auto Publish Powered By : XYZScripts.com