ಬೋರಿಂಗ್ ಅನ್ನಿಸುತ್ತಿದೆಯಾ ಈ ಸಲದ ಬಿಗ್ ಬಾಸ್?.. ಪ್ರೇಕ್ಷಕರು ಏನು ಅಂತಾರೆ.. ಇಲ್ಲಿ ಓದಿ

ಬಿಗ್ ಬಾಸ್ … ಬಿಗ್ ಬಾಸ್… ಬಿಗ್ ಬಾಸ್ ಹೀಗೆಂದು ಗಂಭೀರ ಧ್ವನಿಯಲ್ಲಿ ಕೇಳಿ ಬರುವ ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿಬರುವ ಬಿಗ್ ಬಾಸ್ ಸೀಸನ್ 6 ರ ಬಗ್ಗೆ ಪ್ರೇಕ್ಷಕನಿಗೆ ಅತಿಯಾದ ಕುತೂಹಲವಿತ್ತು. ಈ ರಿಯಾಲಿಟಿ ಶೋ ಶುರುವಾಗಿ ಇದಾಗಲೇ ಎರಡು ವಾರಗಳು ಕಳೆದಿದ್ದು, ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದೂ ಆಯ್ತು. ಇಷ್ಟಾದರೂ ಅದ್ಯಾಕೋ ಏನೋ ಬಿಗ್ ಬಾಸ್ ಮನೆ ಈ ಬಾರಿ ಕಳೆಕಟ್ಟಿಲ್ಲ. ಪ್ರೇಕ್ಷಕನಿಗೆ ಬಹಳಷ್ಟು ಮನರಂಜನೆ ಸಿಗುತ್ತಿಲ್ಲ ಎಂಬ ಮಾತುಗಳ ಜೊತೆಗೆ, ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪೇಜ್ ನಲ್ಲಿ ಪ್ರೇಕ್ಷಕರು ಮಾಡಿರುವ ಕಮೆಂಟ್ ನೋಡಿದರೆ, ಅಚ್ಚರಿಯಾಗುತ್ತಿದೆ.

ಈ ಬಾರಿ ಬಿಗ್ ಬಾಸ್ ಬೋರಿಂಗ್ ಅನಿಸುತ್ತಿದೆ. ಬಹಳಷ್ಟು ಮನರಂಜನೆ ಸಿಗುತ್ತಿಲ್ಲ ಎನ್ನುವುದು ಪ್ರೇಕ್ಷಕನ ಅಭಿಪ್ರಾಯ. ಈ ಬಗ್ಗೆ ನಮ್ಮ ಫೇಸ್ ಬುಕ್ ಪುಟದಲ್ಲಿ ಬೇಸರ ವ್ಯಕ್ತಪಡಿಸಿರುವ ಪ್ರೇಕ್ಷಕರು, ‘ಥೂ ಏನ್ ಬಿಗ್ಬಾಸ್.. ಈ ಸಲದ ಸೀಸನ್ ಯಾಕೋ ಸ್ಪಲ್ಪ ಬೋರ್ ಅನಿಸುತ್ತಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಕೆಲವರು ಗಾಸಿಪ್ ನಲ್ಲೇ ಕಾಲಕಳೆಯುತ್ತಿದ್ದಾರೆ ಹೊರತು, ಟಾಸ್ಕ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ. ಯಾರಿಗೂ ಗೇಮ್ ಸ್ಪೀರಿಟ್ ಇಲ್ಲ ಎನ್ನುವುದು ನೋಡುಗರ ಅಭಿಪ್ರಾಯ. ಡಬ್ಬಾ ಥರ ಇದೆ ಮುಂದಿನ ಸೀಸನ್ ನಲ್ಲಾದರೂ ಮನರಂಜನೆ ಕೊಡುವ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಎನ್ನುವುದು ಮತ್ತೆ ಕೆಲವರ ಕಮೆಂಟ್ ಆಗಿದೆ.

Facebook Auto Publish Powered By : XYZScripts.com