ಬೆಂಕಿ ಆಕಸ್ಮಿಕ: ಹರಹರ ಮಹಾದೇವ ಧಾರಾವಾಹಿ ಚಿತ್ರೀಕರಣ ಸೆಟ್ ಸಂಪೂರ್ಣ ಭಸ್ಮ

ಮುಂಬಯಿ: ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗುವ ಕನ್ನಡ ಭಾಷೆಯ ಹರ ಹರ ಮಹಾದೇವ ಸೀರಿಯಲ್ ಸೆಟ್ ನಲ್ಲ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಮುಂಬಯಿ ವಾಸಿಯ ಮ್ಯಾಗ್ನಂ ಸ್ಟುಡಿಯೋದಲ್ಲಿ ‘ಹರ ಹರ ಮಹಾದೇವ’ ಚಿತ್ರೀಕರಣ ಸೆಟ್‌ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅದೃಷ್ಟವಷಾತ್‌ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಸೆಟ್‌ ತುಂಬಾ ವ್ಯಾಪಿಸಿಕೊಂಡಿದೆ. ಬೆಂಕಿ ಕಾಣಿಸುತ್ತಿದ್ದಂತೆ ಕಲಾವಿದರು, ತಂತ್ರಜ್ಞರು ಸೆಟ್‌ನಿಂದ ಹೊರ ಬಂದಿದ್ದಾರೆ. ಸೆಟ್‌ ಸಂಪೂರ್ಣ ಭಸ್ಮ ವಾಗಿದ್ದು ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿಗಳು ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ. 

Courtesy: Kannada Prabha

Facebook Auto Publish Powered By : XYZScripts.com