ಬಿಡಿಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿಕೊಂಡ ‘ತಾರಕಾಸುರ’

ರಥಾವರ ಚಿತ್ರದ ಬ್ಲಾಕ್ ಬಸ್ಟರ್ ಡೈರಕ್ಟರ್ ಚಂದ್ರಶೇಖರ್ ಬಂಡಿಯಪ್ಪ , ಇದೀಗ ‘ತಾರಕಾಸುರ’ ಚಿತ್ರ ಮಾಡಿದ್ದು, ಈ ಚಿತ್ರ ಸಧ್ಯದಲ್ಲಿಯೇ ಚಿತ್ರೀಕರಣ ಮುಗಿಸಿ ತೆರೆಗೆ ಬರುತ್ತದೆ. ಎನ್ ನರಸಿಂಹಲು ಅವರ ಮಗ ವೈಭವ್ ಈ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಧರ್ಮ ವಿಷ್ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ ಹಾಗೂ ಕುಮಾರ್ ಗೌಡ ಅವರ ಛಾಯಾಗ್ರಹಣವಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ಬಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಸಿಂಗಮ್ 2 ಚಿತ್ರದಲ್ಲಿ ಅಭಿನಯಿಸಿದ್ದ ಹಾಲಿವುಡ್ ನಟ ‘ ಡ್ಯಾನಿ ಸಫಿನ್’ ಈ ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಿದ್ದು, ಈ ಚಿತ್ರ ಬಿಡುಗಡೆಗೂ ಮುನ್ನವೇ, ಹಿಂದಿ ಭಾಷೆಯಲ್ಲಿ ಡಬ್ ಆಗುತ್ತಿದ್ದು, ಹಿಂದಿ ಡಬ್ಬಿಂಗ್ ರೈಟ್ಸ್ ಒಂದು ಕೋಟಿ ಎಪ್ಪತ್ತೈದು ಲಕ್ಷಕ್ಕೆ ಮಾರಾಟವಾಗಿರುತ್ತದೆ. ಹೊಸಬರ ಚಿತ್ರವೊಂದು ಅತೀ ಹೆಚ್ಚಿನ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಪಡೆದಿರುವುದು ದಾಖಲೆಯಾಗಿದೆ.

ಜಾನಪದ ಕಲೆಯನ್ನು ಆಧರಿಸಿದ ಕಥೆಯನ್ನು ಒಳಗೊಂಡಿರುವ ತಾರಕಾಸುರ ಚಿತ್ರದಲ್ಲಿ, ನಮ್ಮ ನಡುವೆ ಅಳಿವಿನ ಅಂಚಿನಲ್ಲಿರುವ ಸಾಕಷ್ಟು ಜಾನಪದ ಕಲೆಗಳಲ್ಲಿ , ತುಂಬಾ ರಿಚ್ ಎನಿಸಿದ ಕಲೆಯನ್ನು ಆಯ್ಕೆ ಮಾಡಿಕೊಂಡು, ಕಮರ್ಶಿಯಲ್ ರೂಪದಲ್ಲಿ ತೆರೆಗೆ ತರುತ್ತಿದ್ದಾರೆ ನಿರ್ದೇಶಕರಾದ ಚಂದ್ರಶೇಖರ್ ಬಂಡಿಯಪ್ಪ

Facebook Auto Publish Powered By : XYZScripts.com