ಬಿಗ್ ಬಾಸ್ ಶೋ ಸ್ಕ್ರಿಪ್ಟೆಡ್?.. ಈ ಸಂಶಯ ಬಂದಿದ್ದೇಕೆ?.. ಇಲ್ಲಿ ಓದಿ

”ಬಿಗ್ ಬಾಸ್’ ಒಂದು ರಿಯಾಲಿಟಿ ಶೋ ಅಲ್ಲ.. ಅದೊಂದು ಸ್ಕ್ರಿಪ್ಟೆಡ್ ಶೋ.. ಇಲ್ಲಿ ವೀಕ್ಷಕರ ಅಭಿಪ್ರಾಯ ಮತ್ತು ಮತಕ್ಕೆ ಯಾವುದೇ ಬೆಲೆ ಇಲ್ಲ.. ಯಾರಿಗೆ ಗೆಲುವು ಸಿಗಬೇಕು ಎಂಬುದು ಮೊದಲೇ ನಿರ್ಧಾರ ಆಗಿರುತ್ತೆ.. ಅದಕ್ಕೆ ತಕ್ಕಂತೆ ‘ಬಿಗ್ ಬಾಸ್’ ಆಟ ಆಡಿಸುತ್ತಾರೆ” ಎಂಬೆಲ್ಲ ಮಾತುಗಳು ಕೇಳಿಬಂದಿವೆ.

ಹೀಗಿದ್ದರೂ, ‘ಬಿಗ್ ಬಾಸ್’ ಕಾರ್ಯಕ್ರಮವನ್ನ ಸೂಕ್ಷ್ಮವಾಗಿ ನೋಡುವ ವೀಕ್ಷಕರ ಸಂಖ್ಯೆ ಕಮ್ಮಿ ಏನಿಲ್ಲ. ಹಾಗೇ, ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡುವ ವೀಕ್ಷಕರು ಅಸಂಖ್ಯಾತ ಮಂದಿ ಇದ್ದಾರೆ. ”ನಾವು ವೋಟ್ ಮಾಡುವ ಸ್ಪರ್ಧಿ ಖಂಡಿತ ಸೇಫ್ ಆಗುತ್ತಾರೆ” ಎಂಬ ನಂಬಿಕೆ ಮೇಲೆ ಹಲವು ವೀಕ್ಷಕರು ಮತ ಚಲಾಯಿಸುತ್ತಾರೆ. ಒಮ್ಮೊಮ್ಮೆ ತಮ್ಮ ನೆಚ್ಚಿನ ಸ್ಪರ್ಧಿ ಔಟ್ ಆದಾಗ ಬೇಸರ ಪಟ್ಟುಕೊಂಡ ವೀಕ್ಷಕರೂ ಇದ್ದಾರೆ.

ಅದೆಲ್ಲ ಬಿಡಿ… ಸದ್ಯ ‘ಬಿಗ್ ಬಾಸ್ ಕನ್ನಡ-6’ ಕಾರ್ಯಕ್ರಮವನ್ನ ಬಿಟ್ಟೂ ಬಿಡದೆ ನೋಡುತ್ತಿರುವ ವೀಕ್ಷಕರಿಗೆ ಒಂದು ಸಂಶಯ ಕಾಡುತ್ತಿದೆ. ಅದೇನು ಅಂತೀರಾ.?

ಧನರಾಜ್ ಹೇಳಿದ್ದೇನು.?

”ನನಗೆ ನಿಮ್ಮ ಕೈಯಿಂದ ಖರ್ಚು ಮಾಡಿ ಆಪ್ ಡೌನ್ ಲೋಡ್ ಮಾಡಿ ಸೇಫ್ ಮಾಡಿದಂತಹ ಎಲ್ಲಾ ಕನ್ನಡ ಸಹೃದಯವಂತರಿಗೆ ನನ್ನ ಅನಂತ ಅನಂತ ಧನ್ಯವಾದಗಳು. ನಿಮ್ಮ ಪ್ರೀತಿ ಹಾರೈಕೆ ಸದಾ ಹೀಗೇ ಇರಲಿ ಅಂತ ನಾನು ಕೇಳಿಕೊಳ್ಳುತ್ತೇನೆ” ಎಂದು ಧನರಾಜ್ ಹೇಳಿದರು.

ಈ ಬಾರಿ ವೂಟ್ ಆಪ್ ನಿಂದಲೇ ವೋಟ್ ಮಾಡಬೇಕು ಎಂಬ ಸಂಗತಿ ಸ್ಪರ್ಧಿಗಳಿಗೆ ಹೇಗೆ ಗೊತ್ತಾಯಿತು ಎಂಬ ಸಂಶಯ ವೀಕ್ಷಕರಲ್ಲಿ ಕಾಡುತ್ತಿದೆ. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

Facebook Auto Publish Powered By : XYZScripts.com