ಬಿಗ್ ಬಾಸ್ ವೇದಿಕೆಯಲ್ಲಿ ಜಗ್ಗೇಶ್ 8 ಎಂಎಂ ಚಿತ್ರ ನೋಡಲು ಬರಬೇಡಿ ಅಂದಿದ್ದೇಕೆ?.. ಇಲ್ಲಿ ಓದಿ

ಜಗ್ಗೇಶ್ ಅವರ 8 ಎಂಎಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ 8 ಎಂಎಂ ಸಿನಿಮಾ ನೋಡಲು ಬರಲೇಬೇಡಿ ಎಂದು ಜಗ್ಗೇಶ್ ಅವರೇ ಹೇಳಿದ್ದಾರೆ! ಅವರು ಯಾಕೆ ಹೀಗೆ ಹೇಳಿದರು?

ನನ್ನ ಇಲ್ಲಿಯವರೆಗಿನ ಪಾತ್ರಗಳನ್ನು ಮೆಚ್ಚಿಕೊಂಡಿದ್ದೀರಿ. ಆದರೆ ಇದು ಹಳೆಯ ಜಗ್ಗೇಶ್ ಮಾಡಿದ ಪಾತ್ರ ಅಲ್ಲ. ಹಳೆಯ ಜಗ್ಗೇಶನ ಛಾಪು ಇಲ್ಲಿ ಇರಲ್ಲ. ಹೊಸ ನಟನೊಬ್ಬ ಬಂದು ಪಾತ್ರ ಮಾಡಿದ್ದಾನೆ ಎಂದು ಸ್ವೀಕರಿಸುವವರು ಮಾತ್ರ ಬನ್ನಿ ಎಂದು ಹೇಳಿದ್ದಾರೆ.

ಡಾ.ರಾಜ್‌ಕುಮಾರ್‌ ಅವರಂತೆ ನಟಿಸಬೇಕೆಂಬ ಆಸೆ ಇತ್ತು. ಅದು 8 ಎಂ ಎಂ ಚಿತ್ರದಲ್ಲಿ ಸಾಧ್ಯವಾಗೊಇದೆ. ಒಮ್ಮೆ 5 ನಿಮಿಷ ಹಾಗೂ ಮತ್ತೊಂದು ದೃಶ್ಯವನ್ನು ಒಂದೇ ಶಾಟ್ ನಲ್ಲಿ ನಟಿಸಿದ್ದೇನೆ. ಅಲ್ಲಿ ನಟಿಸಿದ್ದೇನೆ ಎನ್ನುವುದಕ್ಕಿಂತ ನನ್ನೊಳಗೆ ಅನೇಕ ಕಲಾವಿದರ ನೆನಪು ಮಾಡಿಕೊಂಡು ಅಭಿನಯಿಸಿದ್ದೇನೆ ಎಂದರು.

ಜಗ್ಗೇಶ್ ಅಭಿನಯದ 8 ಎಂಎಂ ಚಿತ್ರ ನವೆಂಬರ್ ತಿಂಗಳಲ್ಲಿ ತೆರೆ ಕಾಣಲು ತಯಾರಾಗಿದೆ.

Facebook Auto Publish Powered By : XYZScripts.com