ಬಿಗ್ ಬಾಸ್ ಮನೆ ಬೆಂಕಿಯಲ್ಲಿ ಭಸ್ಮ.. ಮಾಹಿತಿಗಾಗಿ ಇಲ್ಲಿ ಓದಿ

ರಾಮನಗರ ಜಿಲ್ಲೆಯ ಬಿಡದಿ ಬಳಿಯಲ್ಲಿರುವ ಇನ್ನೋವೇಟಿವ್ ಫಿಲ್ಮಿ ಸಿಟಿಯಲ್ಲಿ ಇಂದು ಮುಂಜಾನೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು,ಬಿಗ್ ಬಾಸ್ ಮನೆ ಬೆಂಕಿಗಾಹುತಿಯಾಗಿದೆ.

ಶಾರ್ಟ್ ಸರ್ಕ್ಯೂಟ್ ಅಗ್ನಿ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಇದರಿಂದಾಗಿ ಸುಮಾರು 4.5 ಕೋಟಿ ರೂ. ನಷ್ಟ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಅಂದಾಜಿಸಲಾಗಿದೆ.

ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಮೇಣದ ಮ್ಯೂಸಿಯಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಬಳಿಕ ಇದಕ್ಕೆ ಹೊಂದಿಕೊಂಡಿರುವ ಕನ್ನಡದ ಬಿಗ್ ಬಾಸ್ ಮನೆಗೂ ವ್ಯಾಪಿಸಿದೆ, ಎಡಿಟಿಂಗ್ ರೂಂ ಬೆಂಕಿಯಿಂದ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ಬೆಂಕಿಯನ್ನು ನಂದಿಸಲು 10ಕ್ಕೂ ಅಧಿಕ ಅಗ್ನಿಶಾಮಕ ದಳದ ವಾಹನಗಳು ಕಾರ್ಯಾಚರಣೆ ನಡೆಸುತ್ತಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Facebook Auto Publish Powered By : XYZScripts.com