ಬಿಗ್ ಬಾಸ್ ಮನೆಯಿಂದ ಹೊರನಡೆದ ಸಾಫ್ಟ್ವೇರ್ ಸುಂದರಿ

ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ನಟ ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಎರಡು ವಾರಗಳನ್ನು ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಮೊದಲನೇ ವಾರ ಮಂಗಳೂರಿನ ಕ್ರಿಕೆಟ್ ಪಟು ರಕ್ಷಿತಾ ರೈ, ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿಯಾಗಿದ್ದು, ಈ ವಾರ ಮತ್ತೊಬ್ಬರು ಮನೆಯಿಂದ ಹೊರ ಬಂದಿದ್ದಾರೆ.

ಈ ವಾರ ನಾಮಿನೇಟ್ ಆಗಿದ್ದ ಅಕ್ಷತಾ ಪಾಂಡವಪುರ, ಆಡಂ ಪಾಷಾ, ಆಂಡ್ರ್ಯೂ, ಕವಿತಾ, ನಯನಾ, ರಾಕೇಶ್, ರಶ್ಮಿ, ರೀಮಾ, ಶಶಿ, ಸ್ನೇಹಾ, ಸೋನು ಅವರ ಪೈಕಿ ರೀಮಾ ಮನೆಯಿಂದ ಔಟ್ ಆಗಿದ್ದಾರೆ.

ಕಳೆದ ವಾರ ಬಿಗ್ ಬಾಸ್ ಮನೆಗೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮನೆಯೊಳಗಿದ್ದ ಸ್ಪರ್ಧಿಗಳಿಗೆ ನೀಡಿದ್ದ ಭರವಸೆಯಂತೆ ಊಟ ಕಳುಹಿಸಿಕೊಟ್ಟಿದ್ದರೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಆಂಡ್ರ್ಯೂ ಗೆ ಈ ಊಟ ಲಭ್ಯವಾಗಿಲ್ಲ.

Facebook Auto Publish Powered By : XYZScripts.com