ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮಾಯಣ: ಪ್ರಥಮ್ ಗೆ ಗೇಟ್ ಪಾಸ್? ಏನಿದು ರಹಸ್ಯ?

 ಬಿಗ್ ಬಾಸ್ ರಿಯಾಲಿಟಿ ಶೋ ಒಂತರಾ ವಿಚಿತ್ರ ಕಾರ್ಯಕ್ರಮ ಎಂಬುದು ಸ್ಪಷ್ಟವಾಗುತ್ತಿದೆ. ಯಾಕೆಂದರೆ ಅದು ಈಗ ರಿಯಾಲಿಟಿ ಚೆಕ್ ಕಾರ್ಯಕ್ರಮದ ಬದಲು ದಾರವಾಹಿಯ ರೂಪ ಪಡೆಯುತ್ತಿದೆಯೇ ಎಂಬ ಸಂಶಯ ಕಾಡುತ್ತಿದೆ. ಈ ವರೆಗೂ ಸಂಜನಾ-ಭುವನ್ ಜೋಡಿಹಕ್ಕಿಗಳಂತಿದ್ದರೆ, ಅವರ ಮಧ್ಯೆ ಈಗ ಪ್ರಥಮ್ ಎಂಟ್ರಿ ಕೊಟ್ಟಿದ್ದಾರೆ.
ಪ್ರಥಮ್ ನಿಜವಾಗಲೂ ಸಂಜನಾರನ್ನು ಇಷ್ಟಪಡುತ್ತಾ ಇದ್ದಾರಾ?, ಅಥವಾ ಭುವನ್ ರನ್ನು ರೇಗಿಸುವ ಉದ್ದೇಶವೇನೋ ಅಂದುಕೊಳ್ಳುತ್ತಿರುವರೇ? ಅನೇಕರು.
ಆದರೆ ಪರಿಸ್ಥಿತಿ ಹಾಗಿಲ್ಲ. ಯಾವಾಗ ಪ್ರಥಮ್ ಲಾರ್ಡ್ ಥರಾ ಗೋಚರಗೊಂಡರೋ ಆವತ್ತೇ ತನ್ನ ಮನದ ಇಂಗಿತವನ್ನು ಹೇಳಿ ಅಧಿಕಾರ ಚಲಾಯಿಸಿದ್ದರು. ಅಷ್ಟೇ ಅಲ್ಲ, ಕಳೆದ ವಾರ ಸೀಕ್ರೆಟ್ ಟಾಸ್ಕ್’ನ  ರೀತಿ ಫೋಸ್ ಕೊಟ್ಟು ಸಂಜನಾ ಸುಂದರಿಯ ಹಿಂದೆ ಓಡಾಡುತ್ತಲೇ ಇದ್ದ ಪ್ರಥಮ್, ಆಕೆಯನ್ನು ಸತಾಯಿಸಿ ಸತಾಯಿಸಿ ಕೊನೆಯ ದಿನ “ಐ ಲವ್ ಯು ಪ್ರಥಮ್” ಎಂದು ಹೇಳಿಸಿಯೇ ಬಿಟ್ಟಿದ್ದರು.
ಆದರೆ ಇದು ಆ ಕ್ಷಣಕ್ಕೆ ಮಾತ್ರ ಎಂಬ ಕಂಡೀಷನ್ ಕೂಡಾ ಹಾಕಿದ್ದರು ಸಂಜನಾ. ಆದರೆ ಮಹಾಕವಿ ಪ್ರಥಮ್ ಬರೆದ ‘ಲವ್ ಕಾವ್ಯ’ ಅವರ ಮನದೊಳಗಿನ ಪುಟಗಳನ್ನು ತೆರೆದೊಟ್ಟಿತು.
ಅಲ್ಲೇ ಆಗಿರುವುದು ಎಡವಡಟ್ಟು. ಅಲ್ಲಿಂದ ಮುಂದೆ ಭುವನ್ ಗೆ ಪ್ರಥಮ್ ನನ್ನು ಕಂಡರೆ ಆಗ್ತಾ ಇಲ್ಲ. ಮಂಗಳವಾರದ ಸ್ಥಿತಿಯಂತೂ ಭುವನ್ ರನ್ನು ಕೆರಳಿ ಕೆಂಡವಾಗಿಸಿತ್ತು. ಭುವನ್ ವರ್ತನೆಯಿಂದ ಬೇಸರಗೊಂಡ ಸಂಜನಾ ನಡುರಾತ್ರಿ ಕಣ್ಣೀರಿಟ್ಟರು. ಅದನ್ನು ನೋಡಲಾಗದೆ ಪ್ರಥಮ್, ಖುದ್ದು ಸಂಜನಾ ಬಳಿ ತೆರಳಿ ಕೈಯಾರೆ ಕಣ್ಣೊರೆಸಿದ್ದಾರೆ.
ಅಲ್ಲೊಂದು ಮಾತುಕತೆ ನಡೆಯಿತು. ಅದು ‘ಲವ್’ ವಿಷಯ.  ತಾನು ‘ನಿಮ್ಮನ್ನು ಲವ್ ಮಾಡಲ್ಲ’ ಎಂದು ಸಂಜನಾ ನೇರವಾಗಿ ಪ್ರಥಮ್ ಬಳಿ ಹೇಳಿಯೇ ಬಿಟ್ಟರು. ಆದರೆ ಪ್ರಥಮ್ ನೊಂದಿಲ್ಲ; ಬದಲಾಗಿ ‘ನಾನು ನನ್ಳೊಳಗೇ ಪ್ರೀತಿಸ್ತಿರುತ್ತೇನೆ’ ಅಂತ ನಯವಾಗಿಯೇ ಹೇಳಿಬಿಟ್ರು ಜಾಣ ಕಿಲಾಡಿಯಂತೆ.
ಆ ನಡುರಾತ್ರಿ ಸಂಜನಾ ವರ್ತನೆ, ಭುವನ್ ಟೆನ್ಚನ್, ಪ್ರಥಮ್ ಆಟಾಟೋಪ ಒಂಥರಾ ಸಂಘರ್ಷದ ಸನ್ನಿವೇಶ ಎದುರಾಗಬಹುದೇ ಎಂಬ ಸುಳಿವನ್ನು ನೀಡುವಂತಿತ್ತು.
ಇದು ಹೀಗೆ ಮುಂದುವರಿದರೆ ಬಿಗ್ ಬಾಸ್ ಮನೆಯಲ್ಲಿ ಏನಾದರೊಂದು ನಡೆಯೋದು ಶತಃಸಿದ್ದ. ಹೀಗಿರುವಾಗ ಈ ಮೂವರು ಮನೆಯಿಂದ ನಿರ್ಗಮಿಸೋ ನಿರ್ಧಾರ ಸಾಧ್ಯತೆಯೂ ಹೆಚ್ಚಿದೆ. ಹಾಗಾಗಿ ಈ ಬಾರಿ ಯಾರು ಎಲಿಮಿನೇಟ್ ಆಗಬಹುದು?
ಯಾವುದಕ್ಕೂ ಶನಿವಾರದವರೆಗೆ ಕಾದುನೋಡೋಣ.
Courtesy: Balkani News

Facebook Auto Publish Powered By : XYZScripts.com