ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್! ಕಾರಣ ಏನು ಗೊತ್ತಾ?

ಸಿನಿಮಾಡೆಸ್ಕ್: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ 5 ಭಾನುವಾರಷ್ಟೆ ಮುಕ್ತಾಯವಾಗಿದ್ದು, ಚಂದನ್ ಶೆಟ್ಟಿ ಈ ಸೀಸನ್ ನಲ್ಲಿ ವಿನ್ನರ್‍ ಆಗಿದ್ದಾರೆ. ಇದೇ ವೇಳೆ ಬಿಗ್ ಬಾಸ್ ಸೀಸನ್ 5ರ ಕೊನೆ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ವೇಳೆಯಲ್ಲಿ ಇಲ್ಲಿ ತನಕ ನಡೆದ ಬಿಗ್ ಬಾಸ್ ಸೀಸನ್ ಗಳ 5 ಸುದೀಪ್ ನಿರೂಪಕರಾಗಿದ್ದಾರೆ, ಇದೇ ವೇಳೆ ಅವರು ಹೇಗೆ 5 ಸೀಸನ್ ಗಳ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಅವರು ನಡೆದು ಬಂದ ಹಾದಿಯನ್ನು ವಿಟಿ ಮೂಲಕ ತೋರಿಸಲಾಗಿತ್ತು.

ಈ ವೇಳೆ ಈ ವೇಳೆ ಸಿಸಿಎಲ್‍ನಲ್ಲಿ ಕಿಚ್ಚ ಸಾರಥ್ಯದಲ್ಲಿ ಆಡುವ ಕರ್ನಾಟಕ ಬುಲ್ಡೋಜರ್ ತಂಡ ಬಿಗ್‍ಬಾಸ್ ಸೀಸನ್ 1ರಲ್ಲಿ ಆಗಮಿಸಿತ್ತು. ಸುದೀಪ್ ನಡೆಸಿಕೊಡುವ ಕಾರ್ಯಕ್ರಮ ಹಾಗೂ ಸ್ಪರ್ಧಿಗಳ ಬಗ್ಗೆ ತಂಡದ ಎಲ್ಲ ಸದಸ್ಯರು ಮಾತನಾಡಿದ್ದರು. ಆಗ ದಿವಗಂತ ದೃವ ಶರ್ಮಾ ತಮ್ಮದೇ ಶೈಲಿಯಲ್ಲಿ ಬಿಗ್‍ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದರು. ಆ ಕ್ಷಣವನ್ನು ಸ್ಪೆಶಲ್ ವಿಟಿಯಲ್ಲಿ ಸೆರೆ ಹಿಡಿದು ಅದನ್ನು ಬಿಗ್‍ಬಾಸ್ ಸೀಸನ್ 5 ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ತೋರಿಸಿದ್ದರು.

ಆ ವೇಳೆಯಲ್ಲಿ ಆ ವಿಡಿಯೋದಲ್ಲಿ ದೃವ ಶರ್ಮಾ ಅವರನ್ನು ನೋಡಿ ಕಿಚ್ಚ ಸುದೀಪ್ ಒಂದು ಕ್ಷಣ ಭಾವುಕರಾದರು. ಅಷ್ಟೇ ಅಲ್ಲದೇ ದೃವ ಅವರ ಗೆಳೆಯರಾದ ಜಯರಾಂ ಕಾರ್ತಿಕ್ (ಜೆಕೆ) ಕೂಡ ಕಣ್ಣೀರಿಟ್ಟರು.

ದೃವ ಶರ್ಮಾ ಕಿಚ್ಚು ಎಂಬ ಚಿತ್ರದಲ್ಲಿ ಕೊನೆಯಾದಾಗಿ ಬಣ್ಣ ಹಚ್ಚಿದ್ದರು. ಆ ಚಿತ್ರಕ್ಕೆ ಕಿಚ್ಚ ಸುದೀಪ್ ಹಿನ್ನಲೆ ಧ್ವನಿಯನ್ನು ಕೂಡ ನೀಡಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು ಶನಿವಾರ ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಏಪ್ರಿಲ್ 1,2017೭ರಲ್ಲಿ ಸಾವನ್ನಪ್ಪಿದ್ದರು.

Facebook Auto Publish Powered By : XYZScripts.com