ಬಿಗ್ ಬಾಸ್ ಇಂದ ಹೊರನಡೆಯಲಿರುವ ಸುದೀಪ್!

ಬಿಗ್ ಬಾಸ್… ಕಲರ್ಸ್ ಕನ್ನಡ ವಾಹನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮ ದಿನದಿಂದ ದಿನಕ್ಕೆ ಪ್ರಸಿದ್ದವಾಗುತ್ತಿದೆ. ಅದರಲ್ಲೂ ಕಾರ್ಯಕ್ರಮದ ನಿರೂಪಕ ಸೆಂಟರ್ ಆಫ್ ದಿ ಆಟ್ರಾಕ್ಷನ್ . ತಮ್ಮ ವಿಭಿನ್ನ ನಿರೂಪಣೆ, ಸ್ಪರ್ಧಿಗಳನ್ನು ಸಮಾಧಾನ ಪಡಿಸುವ ರೀತಿ, ಯಾರಿಗೂ ನೋವಾಗದಂತೆ ಪರಿಸ್ಥಿತಿಯನ್ನು ತಿಳಿಗೊಳಿಸುವ ಸುದೀಪ್ ವೈಖರಿ ಎಲ್ಲರಿಗೂ ಇಷ್ಟ  ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದೀಗ ಕಾರ್ಯಕ್ರಮ ನಿರೂಪಣೆಯಿಂದ ದೂರ ಉಳಿಯಲು ನಟ ಸುದೀಪ್ ನಿರ್ಧರಿಸಿದ್ದಾರಂತೆ. ಸುದೀಪ್ ಈ ನಿರ್ಧಾರ ಅವರ ಅಭಿಮಾನಿಗಳಿಗೆ ಅಚ್ಚರಿಯಾದರೂ, ಬಿಗ್ ಬಾಸ್ ನಿರೂಪಕರ ಈ ನಿರ್ಧಾರಕ್ಕೆ ಕಾರಣ ಹುಚ್ಚ ವೆಂಕಟ್ ಅತಿರೇಕದ ವರ್ತನೆ. ಇತ್ತೀಚೆಗೆ ಬಿಗ್ ಬಾಸ್   ಮನೆಗೆ ಅತಿಥಿಯಾಗಿ ಎಂಟ್ರಿ ಕೊಟ್ಟ ಹುಚ್ಚ ವೆಂಕಟ್ ಈ ಬಾರಿಯೂ ಸ್ಪರ್ದಿಯೊಬ್ಬರ ಮೇಲೆ ಕೈ ಮಾಡಿ ಕಾರ್ಯಕ್ರಮದಿಂದ ಹೊರದಬ್ಬಿಸಿಕೊಂಡಿದ್ದಾರೆ.
ಆದರೆ ಹುಚ್ಚವೆಂಕಟ್ ಈ ನಡೆಯಿಂದ ಬೇಸರಗೊಂಡಿರುವ ಸುದೀಪ್,   ನಾನು ನ್ಯಾಯಪರವಾಗಿ ನಿಲ್ಲುತ್ತೇವೆ. ಹೀಗಾಗಿ ನ್ಯಾಯ ಸಿಕ್ಕಿದ ಮೇಲೆಯೆ ಕಾರ್ಯಕ್ರಮದ ನಿರೂಪಕನಾಗಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ. ಇದು ನನ್ನ ಪ್ರೇಕ್ಷಕರಿಗೆ ನಾನು ನೀಡುವ ಭರವಸೆ. ಎಂದಿರುವ ಕಿಚ್ಚ,  ವೆಂಕಟ್ , ಬಿಗ್ ಬಾಸ್ ಮನೆಯೊಳಗೆ ಹೋಗಿ ಸ್ಪರ್ಧಿಗಳ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ತಪ್ಪು ಆತನಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ.
ಕಳೆದ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದ ಹುಚ್ಚ ವೆಂಕಟ್, ರವಿ ಮುರೂರು ಮೇಲೆ ಹಲ್ಲೆ ನಡೆಸಿ ಸುದ್ದಿಯಾಗಿದ್ದರು. ಈ ಬಾರಿ ಮತ್ತೆ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಹೋಗಿರುವ ಹುಚ್ಚ ವೆಂಕಟ್ ಸೀಸನ್ 4ರ ಸ್ಪರ್ಧಿ ಪ್ರಥಮ್ ಗೆ ರಕ್ತ ಬರುವಂತೆ ಹೊಡೆದಿದ್ದಾರೆ.
Courtesy: Balkani News

Facebook Auto Publish Powered By : XYZScripts.com