ಬಿಗ್ ಬಾಸ್ನಲ್ಲಿ ಶುರುವಾಗಿದೆಯಾ ಹೊಸ ಲವ್ ಸ್ಟೋರಿ?.. ಇಲ್ಲಿ ಓದಿ

ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಪ್ರತಿ ವರ್ಷ ಒಂದಲ್ಲ ಒಂದು ಲವ್ ಸ್ಟೋರಿ ಇದ್ದೆ ಇರುತ್ತೆ. ಅದೇ ರೀತಿ ಈ ಬಾರಿಯೂ ಕೂಡ ಒಂದು ಲವ್ ಸ್ಟೋರಿಯೊಂದು ಪ್ರಾರಂಭವಾಗುವ ಮುನ್ಸೂಚನೆ ದೊರೆತಿದೆ.

ನಿನ್ನೆ ನಡೆದ ಸಂಚಿಕೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಮೊದಲ ಪ್ರೀತಿಯನ್ನು ವ್ಯಕ್ತಪಡಿಸಲು ವೇದಿಕೆ ಕಲ್ಪಸಿದ್ರು, ಆಗ ಎಲ್ಲರು ತಮ್ಮ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು, ಹಳೆಯ ನೆನಪುಗಳೊಂದಿಗೆ ತಮ್ಮ ಫಸ್ಟ್ ಲವ್ ಬಗ್ಗೆ ಸ್ಪರ್ಧಿಗಳು ತಮ್ಮ ಅನುಭವವನ್ನ ಹಂಚಿಕೊಂಡಿದ್ರು, ಆದರೆ ಸೋನು ಪಾಟೀಲ್ ಅವರು ಹಂಚಿಕೊಂಡ ಅನಸಿಕೆ ಎಲ್ಲರಿಗಿಂತ ಭಿನ್ನವಾಗಿತ್ತು.

ಸೋನು ಪಾಟೀಲ್ ಅವರು ಮಾತು ಪ್ರಾರಂಭಿಸಿ ತಮಗೆ 8 ಮಂದಿ ಪ್ರಪೋಸ್ ಮಾಡಿದ್ದಾರೆ, ಅದರಲ್ಲಿ ಇಬ್ಬರು ತನ್ನ ಹೆಸರಿನ ಹಚ್ಚೆ ಹಾಕಿಸಿಕೊಂಡಿದ್ದಾರೆ, ಆದರೆ ನನಗೆ ನನ್ನ ಮೊದಲ ಪ್ರೀತಿ ನನ್ನ ಅಜ್ಜಿ , ಅವರ ಮೇಲಿನ ಪ್ರೀತಿ ಕೊನೆಯ ವರೆಗೆ ಹಾಗೆ ಉಳಿಯಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

ಮಾತು ಮುಂದು ವರಿಸಿ ನಾನು ಯಾರನ್ನು ಇಷ್ಟಪಟ್ಟಿಲ್ಲ ., .ಆದರೆ ನವೀನ್ ಸಜ್ಜು ಅಂದ್ರೆ ನನಗೆ ಇಷ್ಟ, ಆತ ಹೆಣ್ಣು ಮಕ್ಕಳಿಗೆ ನೀಡುವ ಗೌರವ, ಸ್ಪಂದಿಸುವ ರೀತಿ ನನಗೆ ಇಷ್ಟವಾಯಿತು, ನೀನು ನನಗೆ ಒಳ್ಳೆಯ ಸ್ನೇಹಿತ, ಸ್ನೇಹಿತನಾಗಿ ನಿನ್ನನ್ನು ಪ್ರೀತಿಸುತ್ತೇನೆ, ನಿನ್ನ ಒಳ್ಳೆ ತನವನ್ನ ನಾನು ಗೌರವಿಸುತ್ತೇನೆ ಎಂದು ಹೇಳುತ್ತ, ಐ ಲವ್ ಯೂ ಎಂದು ಸೋನು ಪಾಟೀಲ್ ಹಾರ್ಟ್ ಶೇಪ್ ನ ಬಲುನ್ ಅನ್ನ ನವೀನ್ ಕೈಯಲ್ಲಿಟ್ಟರು.

ಇದಕ್ಕೆ ಪ್ರತಿಕ್ರಯಿಸಿದ ನವೀನ ಒಳ್ಳೆಯ ಗೆಳಯನಾಗಿ ಸದಾ ನಿನ್ನೊಂದಿಗೆ ಇರುತ್ತೇನೆ, ನಿನ್ನ ಪ್ರೀತಿಗೆ ನಾನು ಬೆಲೆ ಕೊಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನ ವೀಕ್ಷಿಸಿದ ಪ್ರೇಕ್ಷಕರಿಗೆ ಬಿಗ್ ಬಾಸ್ ನಲ್ಲಿ ಮತ್ತೊಂದು ಲವ್ ಸ್ಟೋರಿ ಶುರುವಾಗುವ ಸೂಚನೆ ದೊರೆತಿದೆ

Facebook Auto Publish Powered By : XYZScripts.com