ಬಿಗ್‍ಬಾಸ್ ಕಿಚ್ಚನ ಔದಾರ್ಯ!

ಬಿಗ್‍ಬಾಸ್ ಮನೆಯೊಳಗಿನ ವಾತಾವರಣ ದಿನೇ ದಿನೇ ರಂಗೇರುತ್ತಿದೆ. ಆದರೆ ಇಲ್ಲಿನ ಟಾಸ್ಕುಗಳು, ಕಿತ್ತಾಟಗಳ ನಡುವೆಯೇ ಊಟ ತಿಂಡಿಯ ವಿಚಾರದಲ್ಲಿ ಎಲ್ಲ ಸ್ಪರ್ಧಿಗಳು ಆಸೆಗಣ್ಣಿನಲ್ಲಿ ಕಾಯುತ್ತಲೇ ಇದ್ದರು. ಟಾಸ್ಕ್ ಎಲ್ಲಾ ಮುಗಿದ ನಂತರ ಮೂಲೇಲೆಲ್ಲೋ ಮುದುರಿಕೊಂಡು ಭೋಜನದ ಗತವೈಭವಗಳನ್ನು ಮೆಲುಕು ಹಾಕುವ ಇವರೆಲ್ಲರ ಅವಸ್ಥೆ ಕಂಡು ಸುದೀಪ್ ಕರಗಿದ್ದಾರೆ.
ಸುದೀಪ್ ಅವ್ರು ಸ್ವತಃ ತಾವೇ ಬಿಗ್‍ಬಾಸ್ ಸೆಟ್ಟಲ್ಲಿ ಎಲ್ಲರಿಗೂ ಅವರವರ ಇಷ್ಟದ ಅಡುಗೆ ಮಾಡಿ, ಅದನ್ನು ನೀಟಾಗಿ ಪ್ಯಾಕು ಮಾಡಿಸಿ ಪ್ರತಿಯೊಂದರ ಮೇಲೆಯೂ ಆಯಾ ಸ್ಪರ್ಧಿಗಳ ಹೆಸರು ಬರೆದು ಕಳಿಸಿದ್ದಾರೆ.
ಇದನ್ನ ಕಂಡು ಸ್ಪರ್ಧಿಗಳೆಲ್ಲ ಹನಿಗಣ್ಣಾಗಿ ಸವಿದಿದ್ದಾರೆ. ಬಿರಿಯಾನಿಯಿಂದ ಮೊದಲ್ಗೊಂಡು ಮಂಗಳೂರು ಬಜ್ಜೆವರೆಗೆ ಪ್ರತಿಯೊಂದನ್ನೂ ಸ್ವತಃ ಸುದೀಪ್ ಅವರೇ ಮಾಡಿ ಕಳಿಸಿದ್ದಾರೆ. ಈ ಮೂಲಕ ಅವರು ಸ್ಪರ್ಧಿಗಳ ಮೇಲೆ ಪ್ರೀತಿ ಪ್ರದರ್ಶಿಸಿದ್ದಾರೆ. ಎಲ್ಲ ಸ್ಪರ್ಧಿಗಳೂ ಕಿಚ್ಚನ ಔದಾರ್ಯಕ್ಕೆ ಆಭಾರಿಗಳಾಗಿದಾರೆ.
Courtesy: Balkani News

Facebook Auto Publish Powered By : XYZScripts.com