‘ಬಾಹುಬಲಿ-2’ ಸಿನಿಮಾದ ಎದುರು ‘ಪೊರ್ಕಿ ಹುಚ್ಚ ವೆಂಕಟ್’!

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅಭಿನಯದ ಚಿತ್ರ ‘ಪೊರ್ಕಿ ಹುಚ್ಚ ವೆಂಕಟ್’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಇದೇ ತಿಂಗಳು 28ಕ್ಕೆ ರಿಲೀಸ್ ಆಗಲಿದೆ.

ಪೊರ್ಕಿ ಹುಚ್ಚ ವೆಂಕಟ್ ಸಿನಿಮಾ ಒಂದು ಸುಂದರ ಪ್ರೇಮ ಕತೆಯನ್ನೊಳಗೊಂಡಿದ್ದು, ಹುಚ್ಚ ವೆಂಕಟ್ ಅವರ ನಿಜ ಜೀವನದ ಕೆಲವು ಅಂಶಗಳು ಹಾಗೂ ರೌಡಿಸಂ, ಪಾಲಿಟಿಕ್ಸ್ ಕೂಡ ಈ ಸಿನಿಮಾದಲ್ಲಿದೆ. ಇನ್ನೂ ಬಾಹುಬಲಿ-2 ಸಿನಿಮಾ ಬಿಡುಗಡೆಯ ದಿನವೇ ಪೊರ್ಕಿ ಹುಚ್ಚ ವೆಂಕಟ್ ರಿಲೀಸ್ ಆಗ್ತಿದೆ.

ಹುಚ್ಚ ವೆಂಕಟ್ ಬಾಹುಬಲಿ ಚಿತ್ರದ ಕಟ್ಟಪ್ಪ ಪಾತ್ರ ಮಾಡಿದ ಸತ್ಯರಾಜ್ ವಿಷಯವಾಗಿ ಫುಲ್ ಗರಂ ಆಗಿದ್ರು. ಒಟ್ಟಿನಲ್ಲಿ ಪೈರಿಂಗ್ ಸ್ಟಾರ್ ನ ಸಿನಿಮಾ ಬಿಡುಗಡೆಯ ದಿನವೇ ಬಾಹುಬಲಿ-2 ಕೂಡ ಆರ್ಭಟಿಸಲಿದೆ. ಬಾಹುಬಲಿ-2 ಸಿನಿಮಾದ ಎದುರು ಹುಚ್ಚ ವೆಂಕಟ್ ಸಿನಿಮಾ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದು ಸದ್ಯಕ್ಕಿರುವ ಕುತೂಹಲ.

Courtesy: Kannada News Now

Facebook Auto Publish Powered By : XYZScripts.com