ಬಾಹುಬಲಿ ಗರಡಿಯಲ್ಲಿ ಸಿಕ್ತು 50 ಕೋಟಿ ರೂ.

ಐನೂರು, ಒಂದು ಸಾವಿರ ರೂಪಾಯಿ ನೋಟುಗಳ ಬಲಾವಣೆಯನ್ನು ನಿರ್ಬಂಧಿಸಿರುವ ಮೋದಿ ಸರ್ಕಾರ ಇದೀಗಬ್ಲ್ಯಾಕ್ ಮನಿ ಇರುವವವರಿಗೆ ಐಟಿ ಶಾಕ್ ನೀಡುತ್ತಿದೆ. ಅದರಲ್ಲೂ ಬಾಹುಬಲಿ ಚಿತ್ರದ ಯಶಸ್ಸಿನಿಂದಬೀಗುತ್ತಿರುವ “ಬಾಹುಬಲಿ” ಚಿತ್ರ ತಂಡಕ್ಕೆ ಬಲವಾದ ಕಾನೂನು ಹೊಡೆತನೀಡಿದೆ.
ಇಂದು ಹೈದರಾಬಾದ್ ನಲ್ಲಿ ನಡೆದ  ಆದಾಯ ತೆರಿಗೆಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ತೆಲುಗು ಚಿತ್ರರಂಗದಲ್ಲಿಸಂಚಲನ ಮೂಡಿಸಿದರು.
“ಬಾಹುಬಲಿ” ಚಿತ್ರದ ನಿರ್ಮಾಕರಮನೆ ಮತ್ತು ಕಚೇರಿಗಳಿಗೆ ದಾಳಿ ಮಾಡಿದರು. ಆ ವೇಳೆ ಬರೋಬ್ಬರಿ 50 ಕೋಟಿ ರೂಪಾಯಿ ಪತ್ತೆಯಾಗಿದೆ ಎನ್ನಲಾಗಿದೆ.
“ಬಾಹುಬಲಿ” ಚಿತ್ರದ ನಿರ್ಮಾಪಕರಾದ ಶಾಬು ಎರ್ಲಗುಡ್ಡಹಾಗೂ ಪ್ರಸಾದ್ ದೇವಿನೇನಿ ಅವರ ನೆಲೆಗಳಿಗೆ ಆದಾಯತೆರಿಗೆ ಅಧಿಕಾರಿಗಳ ತಂಡ ಲಗ್ಗೆ ಹಾಕಿತ. ಪ್ರಮುಖವಾಗಿ, ಹೈದರಾಬಾದ್ ನ ಬಂಜಾರ ಹಿಲ್ಸ್ ನಲ್ಲಿರುವ ಕಚೇರಿ ಮೇಲೆ ಐಟಿ ಅಧಿಕಾರಿಗಳು ಕೆಂಗಣ್ಣು ಬೀರಿದ್ದರು. ಈ ಕ್ಷಿಪ್ರ ದಾಳಿಯಲ್ಲಿ 50 ಕೋಟಿ ರೂಪಾಯಿ ಪತ್ತೆಯಾಯಿತು ಎನ್ನಲಾಗಿದೆ.
ಸುಮಾರು 125 ಕೋಟಿ ರೂಪಾಯಿ ವೆಚ್ಚದಲ್ಲಿ “ಬಾಹುಬಲಿ” ಚಿತ್ರವನ್ನು ನಿರ್ಮಿಸಲಾಗಿತ್ತು. ಆ ಚಿತ್ರ ಸುಮಾರು 600 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಹೇಳಲಾಗುತ್ತಿದೆ.
ಅದರ ಯಶಸ್ಸಿನಿಂದ ಬೀಗುತ್ತಿರುವ ಚಿತ್ರ ತಂಡ ಇದೀಗ ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ “ಬಾಹುಬಲಿ-2”ಚಿತ್ರ ನಿರ್ಮಾಣದಲ್ಲಿ ತೊಡಗಿದೆ. ಒಂದು ಮೂಲಗಳ ಪ್ರಕಾರ“ಬಾಹುಬಲಿ-2”  ಚಿತ್ರಕ್ಕೆ ಈಗಾಗಲೇ 400 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.
ಈ ಸುದ್ದಿ-ಚರ್ಚೆ-ವಿಶ್ಲೇಷಣೆಗಳ ಬೆನ್ನಲ್ಲೇ “ಬಾಹುಬಲಿ” ಚಿತ್ರದ ದಂಡನಾಯಕರ ನೆಲೆಗಳ ಮೇಲೆ ಲಗ್ಗೆ ಹಾಕಿರುವ ಐಟಿ ಅಧಿಕಾರಿಗಳು ಭಾರಿ ಮೊತ್ತದ ಹಣವನ್ನು ಪತ್ತೆಮಾಡಿದ್ದಾರೆ.
Courtesy: Balkani News

Facebook Auto Publish Powered By : XYZScripts.com