ಬಾಹುಬಲಿಗೆ ರಾಗ ಸಿನಿಮಾ ಬಲಿ : ನಟ ಮಿತ್ರ ಆಸ್ಪತ್ರೆಗೆ ದಾಖಲು

ಪ್ರತಿ ಬಾರಿಯಂತೆ ಅನ್ಯಭಾಷೆಗಳ ಚಲನಚಿತ್ರ ಬಿಡುಗಡೆಯಾದ ವೇಳೆ ಕನ್ನಡದ ಚಿತ್ರಗಳು ತಮ್ಮ ಸ್ಥಾನ ಕಳೆದು ಕೊಂಡು ಇನ್ನಿಲ್ಲದ ಹಾಗೇ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ,

ಈಗ ಕೂಡ ಅದೇ ಸನ್ನಿವೇಶ ನಿರ್ಮಾಣವಾಗಿದ್ದು ಕಳೆದ ವಾರವಷ್ಟೆ ಬಿಡುಗಡೆಯಾದ ರಾಗ ಚಿತ್ರ ಈಗ ಬಾಹುಬಲಿ ಹೊಡೆತಕ್ಕೆ ಸಿಕ್ಕಿದೆ. ಕಳೆದ ಶುಕ್ರವಾರ ಏ 21ರಂದು ರಿಲೀಸ್ ಆದ ‘ರಾಗ’ ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ವಿಮರ್ಶೆಗಳೂ ಸಹ ಚೆನ್ನಾಗಿಯೇ ಕೇಳಿಬಂದಿತ್ತು.

ಅಷ್ಟೇ ಅಲ್ಲದೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು ಈ ನಡುವೆ ಶುಕ್ರವಾರ ತೆರೆಕಾಣಲಿರುವ ಬಾಹುಬಲಿಗಾಗಿ ರಾಗ ಚಿತ್ರವನ್ನು ಥಿಯೇಟರ್ ಮಾಲೀಕರು ಸದ್ದಿಲ್ಲದೆ ಎತ್ತಂಗಡಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ಪಿ.ಸಿ ಶೇಖರ್ ಫೇಸ್ ಬುಕ್ ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕನ್ನಡದಲ್ಲಿ ಕನ್ನಡ ಸಿನಿಮಾಗಳಿಗೆ ಉತ್ತೇಜನವಿಲ್ಲ. ಇಂತಹ ಸೃಜನಾತ್ಮಕ ಚಿತ್ರವನ್ನು ಅದು ಒಂದು ವಾರ ಕೂಡ ಕಳೆದಿಲ್ಲ ಆಗಲೇ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ನಿರ್ದೇಶಕ ವಿಭಿನ್ನ ಪ್ರಯತ್ನಕ್ಕೆ ಯಾವುದೇ ಪ್ರಯೋಜನವಿಲ್ಲ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಿತ್ರ ಜನರಿಗೆ ತಲುಪುವ ಮೊದಲೇ ಈ ರೀತಿಯ ಕ್ರಮ ಖಂಡನೀಯ. ಒಂದು ಅವಕಾಶ ನೀಡದೆ ಹೇಗೆ ಕನ್ನಡ ಚಿತ್ರ ಬೆಳೆಯುತ್ತದೆ ಎಂದಿದ್ದಾರೆ.

ಇನ್ನೂ ಮೊದಲಬಾರಿ ನಾಯಕನಾಗಿ ಅಭಿನಯಿಸಿದ ಮಿತ್ರಗೆ ಈ ವಿಷಯ ತಿಳಿದು ಆಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ತೀವ್ರ ರಕ್ತದೊತ್ತಡದ ಪರಿಣಾಮ ಮಿತ್ರಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಿರ್ಮಾಪಕ, ನಟ. ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನ ಇಷ್ಟೇನಾ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com