ಬಾಹುಬಲಿಗೆ ‘ರಾಗ’ ಬಲಿ : ಟ್ವಿಟ್ಟರ್ನಲ್ಲಿ ಜಗ್ಗೇಶ ಹೇಳಿದ್ದೇನು?

ಬಿಡುಗಡೆಯಾದ ಒಂದು ವಾರದಲ್ಲಿಯೇ ಜನರಿಂದ ವ್ಯಾಪಕ ಉತ್ತಮ ಪ್ರಶಂಸೆ ಗಳಿಸಿಕೊಂಡಿದ್ದ ‘ರಾಗ’ ಸಿನಿಮಾ ಬಾಹುಬಲಿ ಸಿನಿಮಾಗೆ ಬಲಿಯಾಗುತ್ತಿದೆ.

ರಾಜ್ಯದಲ್ಲಿಯ ಬಹುತೇಕ ಚಿತ್ರಮಂದಿರಗಳು ‘ರಾಗ’ ಚಿತ್ರವನ್ನು ತೆಗೆದು ಬಾಹುಬಲಿ ಚಿತ್ರ ರಿಲೀಸ್ ಮಾಡುತ್ತಿವೆ. ಆದ್ರೆ ಈ ಬಗ್ಗೆ ಇಲ್ಲಿನ ತನಕ ಯಾವೊಬ್ಬ ನಟ-ನಟಿ ಕೂಡ ಇದರ ಬಗ್ಗೆ ತುಟಿಕ್ ಪಿಟಿಕ್ ಎಂದು ಹೇಳಿಲ್ಲ.

ಇದೇ ವೇಳೆ ಈ ವಿಷಯಕ್ಕೆ ಸಂಬಂಧಪಟ್ಟಂತೆ, ನಟ ಜಗ್ಗೇಶ ನೀಡುವ ಕಾರಣ ಏನು ಗೊತ್ತಾ ? ಜಗ್ಗೇಶ್ ಅಭಿಮಾನಿಯೊಬ್ರು ಕನ್ನಡ ಚಲನಚಿತ್ರೋದ್ಯಮ ಡೌನ್ ಆಗುತ್ತಿದೆ.

ಕೆಲ ಸುದ್ದಿವಾಹಿನಿಗಳು ಬೇರೆ ಭಾಷೆ ಚಿತ್ರಗಳನ್ನು ಪ್ರಮೋಟ್ ಮಾಡುತ್ತಿವೆ ಎಂದು ಬರೆದುಕೊಂಡಿದ್ದರು. ಇದಕ್ಕೆ ಜಗ್ಗೇಶ್ ಟ್ವಿಟರ್ನಲ್ಲಿ ಹೇಳಿಕೊಂಡಿದ್ದು ‘ಪಾಪ ಇದು ನಿಮಗೆ ಹೊಸನೋವು, ನಮಗೆ ಈ ನೋವು 34 ವರ್ಷ ಹಿಂದಿನಿಂದ ಇದೆ! ಅದಕ್ಕೆ ನಾವು ಮೌನ! ಎಂದು ಹೇಳಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com