ಬಾಲಿವುಡ್ ನತ್ತ ಹಾರಿದ ಐಂದ್ರಿತಾ-ಕಮ್ಮಿಂಗ್ ಬ್ಯಾಕ್ ಎನ್ನುತ್ತಿದ್ದಾರೆ..

ಸ್ಯಾಂಡಲ್ ವುಡ್ ಸುಂದರಿ ಐಂದ್ರಿತಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲೂ ಅವರು ಮಿಂಚುತ್ತಿದ್ದಾರೆ. ಹಿಂದಿ ಚಿತ್ರದಲ್ಲಿ ನಟಿಸುವ ಅವರ ಬಗೆಗಿನ ಸುದ್ದಿ ಇತ್ತ ಗಾಂಧಿನಗರದಲ್ಲಿ ಛೇಂಕರಿಸುತ್ತಿದೆ. ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಈ ಬೆಡಗಿ ಬಾಲಿವುಡ್ ಗೆ ಸೇರುತ್ತಿರುವ ಮತ್ತೊಮ್ಮೆ ನಟಿ ಎನಿಸಿಕೊಂಡಿದ್ದಾರೆ. ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಅವರ ಚಿತ್ರದಲ್ಲಿ ನಾಯಕಿಯಾಗಿ ಐಂದ್ರಿತಾ ನಟಿಸುತ್ತಿದ್ದು, ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದಾರೆ.

ಅಂದಹಾಗೆ ಈ ಚಿತ್ರದ ಹೆಸರು ಕಮ್ಮಿಂಗ್ ಬ್ಯಾಕ್.  ಕೆಲವು ಸಮಯದ ಹಿಂದೆ ಬಾಲಿವುಡ್ ನಲ್ಲಿ ಆಫರ್ ಬಂದಾಗ ಇನ್ನೆನೂ ಐಂದ್ರಿತಾ ಬಾಲಿವುಡ್ ನಲ್ಲೇ ಮುಂದುವರೆಯುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇದಕ್ಕೆ ಉತ್ತರಿಸಿರುವ ಐಂದ್ರಿತಾ, ತಾನಿಗ ಕಮಿಂಗ್ ಬ್ಯಾಕ್ ಚಿತ್ರದ ಶೂಟಿಂಗ್ ಗೆ ಹೋಗುತ್ತಿದ್ದೇನೆ. ಇದಾದ ನಂತರ ಮತ್ತೆ ಕನ್ನಡ ಚಿತ್ರಕ್ಕೆ ಕಮಿಂಗ್ ಬ್ಯಾಕ್ ಎಂದಿದ್ದಾರೆ.

ಅರ್ಬಾಜ್ ಜೊತೆ ವಿಕಾಸ್ ವರ್ಮಾ ಕೂಡ ನಟಿಸುತ್ತಿದ್ದು ಭಾರಿ ಪ್ರಚಾರ ಗಿಟ್ಟಿಸಿಕೊಂಡಿದೆ. ಉತ್ತರ ಭಾರತದ ಹಲವೆಡೆ ಮಾತ್ರವಲ್ಲ ಸ್ವಿರ್ಜಲ್ಯಾಂಡ್ ಸೇರಿದಂತೆ ವಿದೇಶದಲ್ಲೂ ಸುಂದರ ತಾಣಗಳಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಈಗಾಗಲೇ ಶೇಕಡಾ 90ರಷ್ಟು ಚಿತ್ರದ ಶೂಟಿಂಗ್ ಮುಗಿದಿದೆ. ಥ್ರಿಲ್ಲರ್ ಕತೆಯನ್ನು ಹೊಂದಿರುವ ಕಮಿಂಗ್ ಬ್ಯಾಕ್ ಚಿತ್ರ ಇನ್ನೆನೋ ಕೆಲವೇ ತಿಂಗಳಲ್ಲಿ ತೆರೆ ಕಾಣಲಿದೆಯಂತೆ.

Courtesy: Balkani News

Leave a Reply

Your email address will not be published.

Facebook Auto Publish Powered By : XYZScripts.com