ಬಾಲಿವುಡ್ ಅಂಗಳಕ್ಕೆ ಜೆ.ಕೆ?

‘ಬಿಗ್ ಬಾಸ್ ಕನ್ನಡ 5’ನೇ ಆವೃತ್ತಿ ಬಳಿಕ ಜೆ.ಕೆ ಅಭಿನಯದ ಮೇ1 ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ನಿರ್ದೇಶಕ ದಯಾಳ್ ನಿರ್ದೇಶನ ಮಾಡಲಿರುವ 2 ಚಿತ್ರಗಳಿಗೆ ಜೆ.ಕೆ ನಾಯಕನಾಗಿದ್ದಾರೆ. ಹಿಂದಿಯಲ್ಲಿ ಸಿಯಾ ಕಾ ರಾಮ್ ಧಾರವಾಹಿಯಲ್ಲಿ ರಾವಣನ ಪಾತ್ರ ಮಾಡಿ ಬಾಲಿವುಡ್ ನಲ್ಲಿ ಚಿರಪರಿಚವಾಗಿರುವ ಜೆ.ಕೆಗೆ ಹಿರಿತೆರೆಯಿಂದ ಆಫರ್ ಬಂದಿದೆ. ಮಾರ್ಚ್ ತಿಂಗಳಲ್ಲಿ ಈ ಹಿಂದಿ ಸಿನಿಮಾ ಆರಂಭವಾಗಲಿದೆ.

ಇದಕ್ಕೆ ರಮೇಶ್ ತಲ್ವರ್ ನಿರ್ದೇಶಕನಾಗಿದ್ದಾರೆ. ಖ್ಯಾತ ನಟಿ ಗೌಹಾರ್ ಖಾನ್ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆನ್ನಲಾಗಿದೆ. ಜೊತೆಗೆ ದಿನಕರ್ ಕಪೂರ್ ನಿರ್ದೇಶನದ ಕೃಷ್ಣ ಅಭಿಷೇಕ್ ನಟನೆಯ ಚಿತ್ರದಲ್ಲಿ ನಟಿಸಲು ಆಫರ್ ಬಂದಿದೆಯಂತೆ.

Facebook Auto Publish Powered By : XYZScripts.com