ಬಾಕ್ಸ್ ಆಫೀಸ್ ಕಲೆಕ್ಷನಿನಲ್ಲಿ ತಮ್ಮದೇ ಚಿತ್ರ ಜೋಗಿ ದಾಖಲೆಯನ್ನೂ ಉಡೀಸ್ ಮಾಡಿದ ಶಿವಣ್ಣನ ಟಗರು

ಶಿವರಾಜ್ ಕುಮಾರ್ ನಟನೆಯ ‘ಟಗರು’ ಸಿನಿಮಾ ಫೆ.23 ರಂದು ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಸಿನಿರಸಿಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಈ ಹಿಂದೆ ಶಿವರಾಜ್ ಕುಮಾರ್ ನಟನೆಯ ಪ್ರೇಮ್ ನಿರ್ದೇಶನದ ಜೋಗಿ ಸಿನಿಮಾ ಚಿತ್ರಮಂದಿರಗಳಲ್ಲಿ ದಾಖಲೆ ಕಲೆಕ್ಷನ್ ಮಾಡಿತ್ತು. ಅಷ್ಟೇ ಅಲ್ಲದೇ ಆರಂಭದ ವಾರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಈಗ ಟಗರು ಸಿನಿಮಾ ಈ ದಾಖಲೆಯನ್ನು ಮುರಿದಿದೆ.

ಟಗರು ಸಿನಿಮಾವನ್ನು ಜಯಣ್ಣ ಕಂಬೈನ್ಸ್ ಮೂಲಕ ವಿತರಣೆ ಮಾಡಲಾಗುತ್ತಿದೆ. 250 ಸಿಂಗಲ್ ಸ್ಕ್ರೀನ್ ಹಾಗೂ 50 ಮಲ್ಟಿಫ್ಲೆಕ್ಸ್ ನಲ್ಲಿ ಟಗರು ರಿಲೀಸ್ ಆಗಿ ರಾಜ್ಯದ ಮೂಲೆ ಮೂಲೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಟಗರು ಸಿನಿಮಾ ಅಂದಾಜು 12 ಕೋಟಿ ರೂ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ವಿಭಿನ್ನ ಚಿತ್ರಕಥೆಯನ್ನು ಹೊತ್ತು ತಂದಿರುವ ಸಿನಿಮಾ ‘ಟಗರು’ಗೆ ಪ್ರೇಕ್ಷಕ ಪ್ರಭು ಫುಲ್ ಫಿದಾ ಆಗಿದ್ದಾನೆ. ಶಿವಣ್ಣನ ಖದರಿಗೆ ಪ್ರೇಕ್ಷಕರು ಫಿದಾ ಆಗಿದ್ದಾನೆ. ವಿಲನ್ ಪಾತ್ರದಲ್ಲಿ ವಸಿಷ್ಟ ಸಿಂಹ, ಧನಂಜಯ್ ಸಖತ್ ಮಿಂಚಿದ್ದಾರೆ. ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶಿಸಿದ್ದು,, ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಹರಿಪ್ರಿಯಾ, ಮಾನ್ವಿತಾ ಹರೀಶ್ ತೆರೆ ಹಂಚಿಕೊಂಡಿದ್ದಾರೆ.

Facebook Auto Publish Powered By : XYZScripts.com