‘ಬಲ್ಲಾಳದೇವ’ ಬಿಚ್ಚಿಟ್ಟ ಬಾಹುಬಲಿ 2 ಚಿತ್ರದ ಬಿಗ್ ಸೀಕ್ರೆಟ್ ಏನು ಗೊತ್ತಾ?

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿದ ಚಿತ್ರ ಬಾಹುಬಲಿ. ಇದೀಗ ಬಾಹುಬಲಿ 2 ಹೇಗಿರುತ್ತೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಇನ್ನೊಂದೆಡೆ ಬಾಹುಬಲಿ 2 ಚಿತ್ರದ ಕೆಲಸ ಭರ್ಜರಿಯಾಗಿ ಸಾಗ್ತಿದೆ. ಇದೀಗ ಚಿತ್ರದ ಖಳನಟನಾಗಿರುವ ರಾಣಾ ದಗ್ಗುಬಾಟಿ ಚಿತ್ರದ ಮುಂದುವರಿದ ಭಾಗದಲ್ಲಿ ಏನೆಲ್ಲಾ ಸ್ಪೆಷಾಲಿಟಿ ಇದೆ ಅನ್ನೋ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
 
ಬಾಹುಬಲಿ ನಂತ್ರ ಬಾಹುಬಲಿ ದಿ ಕಂಕ್ಲೂಶನ್ ಬಹು ದೊಡ್ಡದಾಗಿರುತ್ತಂತೆ. ಭಾಗ ಒಂದರಲ್ಲಿ ಬಂದ ಯುದ್ಧದ ದೃಶ್ಯಗಳಿಗಿಂತ ಬಾಹುಬಲಿ-2 ಚಿತ್ರದ ರಣರಂಗದ ದೃಶ್ಯಗಳು ಅಮೋಘವಾಗಿದ್ದು, ಇದನ್ನು ಯಾರು ಊಹಿಸಲಿಕ್ಕೂ ಸಾಧ್ಯವಿಲ್ಲವಂತೆ. ಬಾಹುಬಲಿ ಚಿತ್ರದಲ್ಲಿ ಯುದ್ಧ ದೃಶ್ಯಗಳು ಹೆಚ್ಚಾಗಿ ಹೈಲೈಟ್ ಆಗಿರೋದ್ರಿಂದ, ಬಾಹುಬಲಿ ಭಾಗ1ಕ್ಕಿಂತ ಹತ್ತುಪಟ್ಟು ಹೆಚ್ಚಾ ಯುದ್ಧದ ಭಾಗವನ್ನು ಭಾಗ-2ರಲ್ಲಿ ಸಿದ್ಧಪಡಿಲಾಗುತ್ತಿದೆ. ಇದಕ್ಕಾಗಿ ಈ ಬಾರಿ ಅಶ್ವದಳ, ಸರ್ಪ ಸೈನ್ಯ, ಮತ್ತು ಗಜಪಡೆಯನ್ನು ಬಳಸಲಾಗಿದೆ.
 
ಚಿತ್ರರಸಿಕನ ಕಣ್ಮನ ಸೆಳೆಯುವಂತೆ ಒಂದೊಂದು ಸೀನನ್ನು ಚೀತ್ರೀಕರಿಸಲಾಗಿದ್ದು, ಭೂಲೋಕವನ್ನೆ ನಡುಗಿಸುವಂತಹ ಅದ್ಬುತ ದೃಶ್ಯಗಳು ಚಿತ್ರದಲ್ಲಿವೆ. ಹಾಗಾಗಿ ಚಿತ್ರದಲ್ಲಿ ರಾಣಣ ಪಾತ್ರವನ್ನು ಇನ್ನಷ್ಟು ಬಲಿಷ್ಟವಾಗಿ ತೋರಿಸಲಾಗಿದೆ ಎಂದು ಪ್ರಭಾಸ್ ಹೇಳಿದ್ದಾರೆ. ಬಾಹುಬಲಿ-ಭಾಗ 1 ರ ನಂತ್ರ ಬಾಹುಬಲಿ 2ನಲ್ಲೂ ಬಲ್ಲಾಳದೇವನ ಪಾತ್ರ  ಸ್ಟ್ರಾಂಗ್ ಆಗಿರೋ ಕಾರಣ ದಗ್ಗುಬಾಟಿ  ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. 8 ತಿಂಗಳು ಸತತವಾಗಿ ಜಿಮ್ನಲ್ಲೇ ಸಮಯ ಕಳೆದಿದ್ದಾರೆ. ಸಾಕಷ್ಟು ಕಸರತ್ತನ್ನು ಮಾಡಿದ್ದಾರೆ. ಮುಂದಿನ ವರ್ಷ ಸಿನಿಮಾ ಭರ್ಜರಿ ಎಂಟ್ರಿ ಕೊಡಲಿದೆ.
 
 
 
Courtesy: Balkani News

Facebook Auto Publish Powered By : XYZScripts.com