ಬದಲಾದ ಟ್ರೆಂಡ್, ಕನ್ನಡದಿಂದ ತೆಲುಗಿಗೆ ಚಿತ್ರಗಳು ರಿಮೇಕ್, ಯಾವೆಲ್ಲ ಚಿತ್ರಗಳು?… ಇಲ್ಲಿದೆ ಮಾಹಿತಿ

ಬೆಂಗಳೂರು: ತೆಲುಗು ಸಿನಿಮಾ ರಂಗದಲ್ಲಿ ಕನ್ನಡ ಚಿತ್ರಗಳ ಹವಾ ಶುರುವಾಗಿದೆ, ಸುಮಾರು ಅರ್ಧ ಡಜನ್ ನಷ್ಟು ಸಿನಿಮಾಗಳು ಕನ್ನಡದಿಂದ ತೆಲುಗಿಗೆ ರಿಮೇಕ್ ಆಗಿರುವ ಚಿತ್ರಗಳು ರಿಲೀಸ್ ಗಾಗಿ ಕಾಯುತ್ತಿವೆ.ಕೆಲ ಕನ್ನಡ ಸಿನಿಮಾಗಳು ತೆಲುಗಿಗೆ ಡಬ್ ಆಗುತ್ತಿವೆ.

ಉತ್ತಮ ಕಥೆಯುಳ್ಳ ಹೊಸ ಯುಗದ ಹಿಟ್ ಕನ್ನಡ ಸಿನಿಮಾಗಳು ಭಾಷೆಯ ಗಡಿ ದಾಟಿ ಹೋಗುತ್ತಿವೆ, ಯೂಟರ್ನ್, ಫರ್ಸ್ಟ್ ರ್ಯಾಂಕ್ ರಾಜು , ಕಿರಿಕ್ ಪಾರ್ಟಿ ಸಿನಿಮಾಗಳು ಮುಂದಿನ ಕೆಲ ತಿಂಗಳುಗಳಲ್ಲಿ ರಿಮೇಕ್ ಆಗಲಿವೆ.

ತೆಲುಗಿನ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಿಖಿಲ್ ನಟಿಸುತ್ತಿದ್ದಾರೆ. ಶರಣ್ ಕೊಪ್ಪಿಶೆಟ್ಟಿ ನಿರ್ದೇಶಿಸುತ್ತಿದ್ದಾರೆ, ಇನ್ನೂ ಮಿಸ್ಟರಿ ಸಿನಿಮಾ ಪವನ್ ಕುಮಾರ್ ನಿರ್ದೇಶನದ ಯೂ-ಟರ್ನ್ ಸಿನಿಮಾ ಕೂಡ ತೆಲುಗು ಮತ್ತು ತಮಿಳಿಗೆ ರಿಮೇಕ್ ಆಗುತ್ತಿದ್ದು, ಸಮಂತಾ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ, ರಾಜಮಂಡ್ರಿಯಲ್ಲಿ ಫೆಬ್ರವರಿ17 ರಿಂದ ಶೂಟಿಂಗ್ ಆರಂಭವಾಗಿದೆ. ಇನ್ನೂ ಫರ್ಸ್ಟ್ ರ್ಯಾಂಕ್ ರಾಜು ಸಿನಿಮಾ ಕೂಡ ರಿಮೇಕ್ ಆಗುತ್ತಿದೆ. ಪ್ರಸಕ್ತ ಸ್ಥಿತಿಯಲ್ಲಿ ಶಿಕ್ಷಣದ ವ್ಯವಸ್ಥೆಯನ್ನು ಮನರಂಜನೆ ಮೂಲಕ ತಿಳಿಸಲಾಗುತ್ತಿದೆ.

ಇನ್ನೂ ಈ ಹಿಂದೆಯೂ ಕೂಡ ಕನ್ನಡ ಸಿನಿಮಾಗಳು ತೆಲುಗಿಗೆ ರಿಮೇಕ್ ಆಗಿವೆ ಆದರೆ ಆ ಸಿನಿಮಾಗಳು ಅಷ್ಟರ ಮಟ್ಟಿಗೆ ಯಶಸ್ಸು ಕಂಡಿಲ್ಲ, ಅನಂತಮ್ ಕಡಿದಿ ಆರಂಭಂ,- ಅಂತ ಸಿನಿಮಾ, ವಾನಾ-ಮುಂಗಾರು ಮಳೆ, ಯೋಗಿ-ಜೋಗಿ, ನಾಗವಲ್ಲಿ- ಆಪ್ತ ರಕ್ಷಕ, ಪೊಟುಗುಡ-ಗೋವಿಂದಾಯ ನಮ, ಇದಿ ನಾ ಲವ್ ಸ್ಟೋರಿ- ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾಗಳು ಕನ್ನಡದಂತೆ ತೆಲುಗಿನಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.

ಆದರೆ ಫರ್ಸ್ಟ್ ರ್ಯಾಂಕ್ ರಾಜು ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡುತ್ತಿರುವ ಮಾರುತಿ, ಇದೊಂದು ಅದ್ಭುತ ಕಥಾವಸ್ತುವಾಗಿದ್ದು, ಎಲ್ಲಾ ವರ್ಗದ ಪ್ರೇಕ್ಷಕರ ಮೆಚ್ಚುಗೆ ಪಡೆಯಲಿದೆ ಎಂದು ಹೇಳಿದ್ದಾರೆ.

Facebook Auto Publish Powered By : XYZScripts.com