ಬಂದ ಅತಿಥಿಗಳಿ ಕಾಫಿ ಜೊತೆ ನಿಪ್ಪಟ್ಟು ಕೊಡಿ!

ಈಗ ಎಲ್ಲೆಲ್ಲಿಯೂ ದಸರಾ ಹಬ್ಬದ ಸಡಗರ. ಮನೆ ಮನಗಳಲ್ಲಿ ಖುಷಿ ಮೂಡಿದೆ. ಹಬ್ಬದ ಪ್ರಯುಕ್ತ ಅಥವಾ ಪೂಜೆಯ ಪ್ರಯುಕ್ತ ಮುತ್ತೈದೆಯರು ಅರಿಶಿಣ ಕುಂಕುಮಕ್ಕೆ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರೋದು ಸಾಮಾನ್ಯ. ಹೀಗೆ ಅರಿಶಿಣ ಕುಂಕುಮಕ್ಕೆ ಬಂದ ಅತಿಥಿಗಳಿಗೆ ತಿನ್ನೋಕೆ ಕುಡಿಯೋಕೆ ಏನಾದ್ರು ಕೊಟ್ಟು ಸತ್ಕರಿಸಬೇಕು ಅಲ್ವೇ..? ಅದೇ ಕಾಫಿ ಟೀ ಜೊತೆಗೆ ಸ್ವಲ್ಪ ಗರಿ ಗರಿಯಾಗಿರೋದನ್ನ ಕೊಟ್ರೆ ಚನ್ನಾಗಿರುತ್ತಲ್ವೇ..? ಹಂಗಾಗಿ ನಾವಿವತ್ತು ನಿಮ್ಗೆ ಗರಿ ಗರಿಯಾದ ನಿಪ್ಪಟ್ಟು ಹೇಗೆ ಮಾಡ್ಬೇಕು ಅಂತ ಹೇಳಿಕೊಡ್ತೀವಿ.
ನಿಪ್ಪಟ್ಟು ಮಾಡೋಕೆ ಬೇಕಾಗುವ ಸಾಮಾಗ್ರಿಗಳು
• 1 ಕಪ್ ಅಕ್ಕಿ ಹಿಟ್ಟು
• 2 ಚಮಚ ಮೈದಾ ಹಿಟ್ಟು
• 1/4 ಒಣ ಕೊಬ್ಬರಿ
• 2 ಚಮಚ ಹುರಿದು ಪುಡಿ ಮಾಡಿದ ನೆಲಗಡಲೆ ಪುಡಿ
• 2 ಚಮಚ ಹುರಿಗಡಲೆ
• ಚಿಟಿಕೆ ಇಂಗು
• 1 ಚಮಚ ಜೀರಿಗೆ
• 1 ಚಮಚ ಹಸಿಮೆಣಸಿನ ಕಾಯಿ ಪೇಸ್ಟ್
• ಉಪ್ಪು
• ಎಣ್ಣೆ
ಮಾಡುವ ವಿಧಾನ: ಅಕ್ಕಿ ಹಿಟ್ಟಿಗೆ ಮೈದಾ ಹಿಟ್ಟು, ಪುಡಿ ಮಾಡಿದ ಒಣಕೊಬ್ಬರಿ ಮತ್ತು ನೆಲಗಡೆ ಹಾಕಿ. ಇದಕ್ಕೆ ಹುರಿಗಡಲೆ ಪುಡಿ, ಜೀರಿಗೆ ಹಸಿ ಮೆಣಸಿನ ಕಾಯಿ ಪೇಸ್ಟ್, ಇಂಗು ಮೇಲಿನ ಎಲ್ಲಾ ಪದಾರ್ಥಗಳನ್ನು ಹಾಕಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಿಸಿ. ನೀರು ಒಂದೇ ಸಲ ಹಾಕಬೇಡಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಕಲಿಸಿ. ಸ್ವಲ್ಪ ಗಟ್ಟಿ ಹದಕ್ಕೇ ಕಲಿಸಿಕೊಳ್ಳಿ. ಇತ್ತ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ಮೇಲೆ ಚಿಕ್ಕ ಚಿಕ್ಕ ಉಂಡೆ ಮಾಡಿ ಅದನ್ನು ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಹಾಳೆಯ ಮೇಲೆ ಇಟ್ಟು ಕೈಯಿಂದ ತಟ್ಟಿ ಕಾದ ಎಣ್ಣೆಗೆ ಹಾಕಿ. ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ನಿಪ್ಪಟ್ಟು ರೆಡಿ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com