ಫೆಬ್ರವರಿ 2 ರಿಂದ 9ರ ವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

ಅದ್ಧೂರಿ ಸಿನಿ ಪರ್ವಕ್ಕೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದೆ. ಈ ಬಾರಿ ಮತ್ತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು ಸಿನಿ ರಸಿಕರ ಪಾಲಿಗೆ ಅದ್ದೂರಿ ಜಾತ್ರೆಯಾಗಲಿದೆ.
ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಇದೀಗ ಮುಹೂರ್ತ ಫಿಕ್ಸ್ ಆಗಿದ್ದು, ನೂತನ ವರ್ಷ, 2017 ರ ಫೆಬ್ರವರಿ 2ರಿಂದ 9ರ ವರೆಗೆ ನಡೆಯಲಿದೆ. ಬೆಂಗಳೂರು ಮಾತ್ರವಲ್ಲ ಮೈಸೂರಿನಲ್ಲೂ ಈ ಸಿನಿ ಸಂಭ್ರಮ ಜರುಗಲಿದ್ದು, ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ.
ಚಿತ್ರೋತ್ಸವಕ್ಕೆ ಏಷಿಯನ್ ಸಿನಿಮಾ, ಇಂಡಿಯನ್ ಸಿನಿಮಾ, ಕನ್ನಡ ಸಿನಿಮಾ, ಕನ್ನಡದ ಪ್ರಖ್ಯಾತ ಮನೋರಂಜನಾ ಸಿನಿಮಾಗಳು ಸ್ಪರ್ಧೆಯಲ್ಲಿದೆ. ಸುಮಾರು 50 ದೇಶಗಳ 180ಕ್ಕೂ ಹೆಚ್ಚು ಚಿತ್ರಗಳು ಚಿತ್ರೋತ್ಸವಕ್ಕೆ ಪ್ರದರ್ಶನ ಕಂಡು ಪ್ರಶಸ್ತಿಗಳಿಗಾಗಿ ರೆಸ್ ನಲ್ಲಿವೆ. ಶೇಖಡಾ 30 ರಷ್ಟು ಮಹಿಳೆಯರು ನಿರ್ಮಿಸಿ, ನಿರ್ದೇಶಿಸಿರೋ ಸಿನಿಮಾಕ್ಕೆ ಈ ಬಾರಿ ಪ್ರಾಶಸ್ತ್ಯ ನೀಡಲಾಗುವುದು ಎಂಬ ಸುಳಿವನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೀಡಿದ್ದಾರೆ.
ಕಮರ್ಷಿಯಲ್ ಬೇಸ್ ಸಿನಿಮಾಗಳೂ ಪೈಪೋಟಿ ನೀಡಲಿದ್ದು ಈಗಾಗಲೇ ಹಲವು ಸಿನಿಮಾಗಳು ಸ್ಪರ್ಧೆಗೆ ರೆಡಿಯಾಗಿ ನಿಂತಿವೆ. ಬೆಂಗಳೂರಿನ ರಾಜಾಜಿನಗರದ ಓರಿಯನ್ ಮಾಲ್ ನ ಪಿವಿಆರ್ ಸಿನಿ ಮಂದಿರ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಪ್ರತಿದಿನ 11 ಶೋ ನಂತೆ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ತಿಳಿಸಿದ್ದಾರೆ.
Courtesy: Balkani News

Facebook Auto Publish Powered By : XYZScripts.com