ಪ್ರೇಮಿಗಳ ದಿನದಂದು ತಮ್ಮ ಪ್ರೇಮದ ಸುಮಧುರ ಕ್ಷಣ ನೆನಪಿಸಿಕೊಂಡ ಯಶ್ ರಾಧಿಕಾ ದಂಪತಿ

ತೆರೆಮೇಲೆ ಮಾತ್ರ ಅಲ್ಲ, ನಿಜ ಜೀವನದಲ್ಲಿಯೂ ಲವ್ ಮಾಡಿ, ಮದುವೆ ಆದವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್.

‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಅಂತಲೇ ಕರೆಯಿಸಿಕೊಳ್ಳುವ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷದ ಮೇಲಾಗಿದೆ. ಆದ್ರೆ, ಅದಕ್ಕೂ ಮುನ್ನ ವರ್ಷಗಳ ಕಾಲ ಪ್ರೇಮ ಪಾಶದಲ್ಲಿ ಸಿಲುಕಿದ್ದರು. ಧಾರಾವಾಹಿಯಲ್ಲಿ ತೆರೆ ಹಂಚಿಕೊಂಡ ಈ ಜೋಡಿ, ಬಳಿಕ ಬೆಳ್ಳಿತೆರೆ ಮೇಲೂ ಯಶಸ್ವಿ ಆದರು.

ಅಂದು ಪ್ರೇಮಿಗಳು, ಇಂದು ದಂಪತಿಗಳಾಗಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಗೆ ‘ಪ್ರೇಮಿಗಳ ದಿನ’ ಅಂದ್ರೆ ತುಂಬಾ ಸ್ಪೆಷಲ್. ಈ ಬಾರಿ ಪ್ರೇಮಿಗಳ ದಿನವನ್ನ ಯಶ್ ಹಾಗೂ ರಾಧಿಕಾ ಪಂಡಿತ್ ಅಮೇರಿಕಾದ ಶಿಕಾಗೋದಲ್ಲಿ ಕಳೆಯಲಿದ್ದಾರೆ. ಈ ಸಂದರ್ಭದಲ್ಲಿ ಒಂದು ಅಪರೂಪದ ಫೋಟೋವನ್ನ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ನೋಡಿ…

ದಶಕದ ಹಿಂದೆ, ಅಂದ್ರೆ, 2006 ರಲ್ಲಿ ಕ್ಲಿಕ್ ಆದ ಈ ಫೋಟೋನ ರಾಧಿಕಾ ಪಂಡಿತ್ ‘ವ್ಯಾಲೆಂಟೈನ್ಸ್ ಡೇ’ ಪ್ರಯುಕ್ತ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

 

”ಈ ಫೋಟೋ ಕ್ಲಿಕ್ ಆದಾಗ ನಾನು ಮತ್ತು ಯಶ್ ಒಳ್ಳೆಯ ಸ್ನೇಹಿ

ತರಾಗಿದ್ವಿ. ಆದ್ರೀಗ, ಈ ಫೋಟೋನ ನೋಡಿದ್ರೆ ಆಗಲೇ ಪ್ರೀತಿ ನಮ್ಮ ಹೃದಯಾಳದಲ್ಲಿ ಅಡಗಿತ್ತು. ಆದ್ರೆ, ನಮ್ಮ ಅರಿವಿಗೆ ಬಂದಿರ್ಲಿಲ್ವೇನೋ ಎಂಬ ಭಾವನೆ ಮೂಡುತ್ತೆ” ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.

ಸದ್ಯ ರಾಧಿಕಾ ಪಂಡಿತ್ ಅಮೇರಿಕಾದ ಶಿಕಾಗೋದಲ್ಲಿದ್ದಾರೆ. ಪ್ರೇಮಿಗಳ ದಿನದಂದು ಪತ್ನಿಯ ಜೊತೆಗಿರಲು ಯಶ್ ಅಮೇರಿಕಾಗೆ ಪಯಣ ಬೆಳೆಸಿದ್ದಾರೆ.

ರಾಧಿಕಾ ಪಂಡಿತ್ ಸಹೋದರನಿಗೆ ಹೆಣ್ಣು ಮಗುವಾಗಿದೆ. ರಾಧಿಕಾ ಸಹೋದರ ನೆಲೆಸಿರುವುದು ಶಿಕಾಗೋದಲ್ಲಿ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗಿರುವುದರಿಂದ ಕೆಲ ದಿನಗಳ ಹಿಂದೆಯಷ್ಟೇ ರಾಧಿಕಾ ಅಮೇರಿಕಾಗೆ ಹಾರಿದ್ದರು. ಈಗ ಯಶ್ ಕೂಡ ಶಿಕಾಗೋಗೆ ಫ್ಲೈಟ್ ಹತ್ತಿದ್ದಾರೆ.

Facebook Auto Publish Powered By : XYZScripts.com