ಪ್ರೇಕ್ಷಕರನ್ನ ಹೆದರಿಸಲು ಪುನೀತ್ ರಾಜ್ ಕುಮಾರ್ ತಯಾರಿ

ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾ 50 ದಿನಗಳನ್ನ ಪೂರೈಸಿದೆ. ಆದರೆ ಇನ್ನು ಕೂಡ ಅಪ್ಪು ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿದೆ.

ಫ್ಯಾಮಿಲಿ ಪವರ್ ಹಾಗೂ ಪಿ ಆರ್ ಕೆ ಬ್ಯಾನರ್ ಕೆಲಸಗಳಲ್ಲಿ ಬ್ಯುಸಿ ಆಗಿರುವ ಪುನೀತ್ ಹೊಸ ಸಿನಿಮಾ ಯಾವಾಗ ಶುರುವಾಗುತ್ತೆ. ಎನ್ನುವುದು ಅಭಿಮಾನಿಗಳ ಪ್ರಶ್ನೆ ಆಗಿದೆ. ಕಾಲಿವುಡ್ ಡೈರೆಕ್ಟರ್ ಜೊತೆ ಅಪ್ಪು ಕೆಲಸ ಮಾಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು ನಂತರ ಶಶಾಂಕ್ ನಿರ್ದೇಶನದ ಚಿತ್ರ ಆರಂಭ ಆಗುತ್ತೆ ಎಂದರು.

ಅಧಿಕೃತವಾಗಿ ಪುನೀತ್ ಎಲ್ಲಿಯೂ ಯಾವ ಚಿತ್ರದಲ್ಲಿ ಅಭಿನಯಿಸುತ್ತೇನೆ ಎಂದು ಹೇಳಿಕೊಂಡಿಲ್ಲ. ಅಂತೆ ಕಂತೆ ಮಧ್ಯೆ ಹೊಸದೊಂದು ಸುದ್ದಿ ಬೆಳಕಿಗೆ ಬಂದಿದೆ. ರಣವಿಕ್ರಮ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಪವನ್ ಒಡೆಯರ್ ಮತ್ತೆ ಪವರ್ ಸ್ಟಾರ್ ಅವರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದರೆ ಅಪ್ಪು ಈ ಚಿತ್ರದ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಹಾಗಾದ್ರೆ ಪುನೀತ್ ಯಾವ ರೀತಿಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

ಹೊಸ ಪ್ರಯೋಗಕ್ಕೆ ಮುಂದಾದರು ಪುನೀತ್
ಹಾರಾರ್ ಸಿನಿಮಾದಲ್ಲಿ ಪವರ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾರಾರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಂತೆ. ಪವನ್ ಒಡೆಯರ್ ಸಿನಿಮಾವನ್ನ ನಿರ್ದೇಶನ ಮಾಡಲಿದ್ದು ಇದೇ ಮೊದಲ ಬಾರಿಗೆ ಅಪ್ಪು ಹಾರಾರ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

 

Facebook Auto Publish Powered By : XYZScripts.com