ಪ್ರಿಯತಮನಿಗಾಗಿ ಹಿಂದೂ ಧರ್ಮಕ್ಕೆ ಸಮಂತಾ ಮತಾಂತರ?

ಟಾಲಿವುಡ್ ನಲ್ಲಿ ಸದ್ಯ ಲವ್ ಸ್ಟೋರಿ ಇಂದ್ಲೇ ಸಿನಿಮಾಗಿಂತ ಜಾಸ್ತಿ ಸುದ್ದಿ ಮಾಡ್ತಿರೋ ಜೋಡಿ ಅಂದ್ರೆ ಅದು ನಾಗಚೈತನ್ಯ ಹಾಗು ಸಮಂತಾರ ಬಗ್ಗೇನೆ. ಈ ಲವ್ ಬರ್ಡ್ಸ್ ಸೀಕ್ರೆಟ್ ಆಗಿ ನಡೆಸ್ತಿದ್ದ ತಮ್ಮ ಪ್ರೀತಿಯ ವ್ಯವಹಾರದ ಬಗ್ಗೆ ಯಾವಾಗ ಕ್ಲ್ಯೂ ಬಿಟ್ಟು ಕೋಟ್ರೊ ನೋಡಿ. ಅಲ್ಲಿಂದ ಮುಗಿದೇ ಹೋಯ್ತು ಕಥೆ. ದಿನಕ್ಕೊಂದು ಸುದ್ದಿಯಾದ್ರು ಈ ಜೋಡಿ ಹಕ್ಕಿಗಳ ಬಗ್ಗೆ ಇರ್ಲೇಬೇಕಿತ್ತು.
ಹೀಗೆ ಇವಿರಿಬ್ರ ಪ್ರೇಮ್ ಕಹಾನಿ ಜಗಜ್ಜಾಹೀರಾತಾಗಿದ್ದೇ ತಡ, ಸಮ್ಮು ಹಾಗು ಚೈತನ್ಯ ಈ ಎಲ್ಲಾ ಅಂತೆಕಂತೆಗಳಿಗೆ ಬ್ರೇಕ್ ಹಾಕೋಕೆ ಎಲ್ರು ಮುಂದೇ ತಮ್ಮ ಪ್ರೀತಿಯ ಬಗ್ಗೆ ಒಪ್ಪಿಕೊಂಡು, ಸದ್ಯದಲ್ಲೇ ಮದುವೆ ಆಗುವುದಾಗಿ ಕೂಡ ತಿಳಿಸಿದ್ದಾರೆ. ಹೌದು, ಇದಕ್ಕೆ ಅಕ್ಕಿನೇನಿ ಫ್ಯಾಮಿಲಿ ಹಾಗು ಸಮಂತಾ ಕುಟುಂಬದ ಸಮ್ಮತಿ ಕೂಡ ಸಿಕ್ಕಿದ್ದು. ಮುಂದಿನ ವರ್ಷ ಸಮಂತಾ ರೂತ್ ಪ್ರಭು, ಸಮಂತಾ ಅಕ್ಕಿನೇನಿ ಆಗಲಿದ್ದಾರೆ.
ಇದೇ ಟೈಮಲ್ಲೀಗ ತಾನು ದೀಪ ಬೆಳಗಿಸೋ ಮನೆಗಾಗಿ ಸಮಂತಾ ದೊಡ್ಡ ತ್ಯಾಗವನ್ನ ಮಾಡಿದ್ದಾರೆ. ಹೌದು ಆಕ್ಚುಯಲಿ ಸಮಂತಾ ಕ್ರಿಶ್ಚಿಯನ್. ನಾಗಚೈತನ್ಯ ಹಿಂದು ಧರ್ಮಕ್ಕೆ ಸೇರಿದ್ದಾರೆ. ಇದಕ್ಕೆ ಇಂಬುಕೊಡುವಂತೆ ನಾಗರ್ಜುನ ಮನೆಯಲ್ಲಿ ನಾಗಚೈತನ್ಯ ಹಾಗು ಸಮಂತಾರನ್ನ ಕೂರಿಸಿ ಒಂದು ಶಾಸ್ತ್ರ ಮಾಡಲಾಗಿದೆ. ಅವ್ರ ಹಿಂದೇನೆ ನಾಗರ್ಜುನ ಕೂಡ ಇರೋ ಎರಡು ಪೋಟೊಗಳು ಸೋಶಿಯಲ್ ನೆಟ್ ವರ್ಕಿಂಗ್ ಸೈಟ್ ಗಳಲ್ಲಿ ಜೋರಾಗಿ ಹರಿದಾಡ್ತಿವೆ. ಅದ್ರಲ್ಲಿ ಸಮಂತಾ ಹಣೆಗೆ ಕುಂಕುಮವನ್ನ ಇಡಲಾಗಿದೆ.
ಅಲ್ದೆ, ಆ ಪೋಟೊದಲ್ಲಿ ಸಾಕಷ್ಟು ಪುರೋಹಿತರುಗಳು ಇರೋದನ್ನ ನೋಡಿ ಸಮಂತಾ ಹಿಂದು ಸಂಪ್ರಾದಾಯವನ್ನ ಸ್ವೀಕರಿಸಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಅಕ್ಕಿನೇನಿ ಫ್ಯಾಮಿಲಿಯವ್ರಾಗ್ಲಿ ಅಥ್ವಾ ಸಮಂತಾ ಇನ್ನು ಬಾಯ್ಬಿಟ್ಟಿಲ್ಲ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com