ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಪಾಲಾದ ‘ಸ್ಟಾರ್’ ಬಿರುದು

ನಟ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ಈಗಾಗಲೇ ಕನ್ನಡದ ಅನೇಕ ಸಿನಿಮಾ ಮಾಡಿದ್ದಾರೆ. ಅವರ ಕೆಲವು ಸಿನಿಮಾಗಳು ಗೆದ್ದರೆ ಕೆಲವು ಸಿನಿಮಾಗಳು ಮಕಾಡೆ ಮಲಗಿದ್ದವು. ಕೆಲ ತಿಂಗಳ ಹಿಂದೆ ‘ಕ್ರ್ಯಾಕ್’ ಸಿನಿಮಾ ಮಾಡಿದ್ದ ವಿನೋದ್ ಪ್ರಭಾಕರ್ ಈಗ ‘ಮರಿ ಟೈಗರ್’ ಆಗಿದ್ದಾರೆ. ಅದರ ಜೊತೆಗೆ ವಿನೋದ್ ಪ್ರಭಾಕರ್ ಇದರ ಮೂಲಕ ಅಂತು ಸ್ಟಾರ್ ಬಿರುದು ಪಡೆದಿದ್ದಾರೆ.

ವಿನೋದ್ ಪ್ರಭಾಕರ್ ಅಭಿನಯದ ‘ಮರಿ ಟೈಗರ್’ ಸಿನಿಮಾ ನಿನ್ನೆ ರಾಜ್ಯಾದಂತ್ಯ ರಿಲೀಸ್ ಆಗಿದೆ. ಈ ಚಿತ್ರತಂಡ ವಿನೋದ್ ಪ್ರಭಾಕರ್ ಅವರಿಗೆ ಹೊಸ ಬಿರುದು ನೀಡಿದೆ. ಇನ್ನು ಮುಂದೆ ಈ ಮರಿ ಟೈಗರ್ ಸ್ಯಾಂಡಲ್ ವುಡ್ ‘ಲೀಡಿಂಗ್ ಸ್ಟಾರ್’ ಆಗಿದ್ದಾರೆ.

ಅಂದಹಾಗೆ, ವಿನೋದ್ ಪ್ರಭಾಕರ್ ಅವರ ‘ಮರಿ ಟೈಗರ್’ ಸಿನಿಮಾ ಈ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ನಿನ್ನೆ ಕೊನೆಗೂ ತೆರೆಗೆ ಬಂದಿದೆ. ಸಿನಿಮಾ ನೋಡಿದ ಮಂದಿ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ಮಾಸ್ ಸಿನಿಮಾ ಆಗಿದ್ದು, ಹೊಡೆದಾಟ ಜಾಸ್ತಿ ಇದ್ದು ಕಥೆ ಕಡೆ ನಿರ್ದೇಶಕರು ಗಮನ ಹರಿಸಿಲ್ಲ.

source: filmibeat

Facebook Auto Publish Powered By : XYZScripts.com